ಮಂಗಳವಾರ, ಜೂನ್ 15, 2021
25 °C
ಕೋವಿಡ್ ಸಂದರ್ಭದಲ್ಲಿ ಖಿನ್ನತೆ ಸಾಧ್ಯತೆ: ಸಹಾಯವಾಣಿ ಸಂಖ್ಯೆ 1098

ಮಕ್ಕಳ, ಮಹಿಳೆಯರ ಪುನರ್ವಸತಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಕೋವಿಡ್‌ನಿಂದಾಗಿ ಕೆಲವು ಕುಟುಂಬಗಳಲ್ಲಿ ಎಲ್ಲ ಸದಸ್ಯರು ಸೋಂಕಿಗೆ ತುತ್ತಾಗಿದ್ದಾರೆ. ಮಕ್ಕಳು ಕುಟುಂಬದಿಂದ ದೂರ ಇರಬೇಕಾದ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗುವ ಸಂದರ್ಭಗಳು ಹೆಚ್ಚಾಗಿವೆ. ಹಾಗಾಗಿ ಅಂಥ ಮಕ್ಕಳಿಗೆ ಅಗತ್ಯ ನೆರವು ನೀಡಿ ಪುನರ್ವಸತಿ ಕಲ್ಪಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಪ್ರಿಯಾಂಗಾ.ಎಂ ಸೂಚಿಸಿದರು.

ಜಿಲ್ಲೆಯ ಎಲ್ಲ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಜೊತೆ ಬುಧವಾರ ವಿಡಿಯೊ ಸಂವಾದ ನಡೆಸಿ ಅವರು ಮಾತನಾಡಿದರು.

‘ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಸಂಕಷ್ಟಕ್ಕೆ ಒಳಗಾಗುವ ಮಕ್ಕಳ ಸಂಖ್ಯೆಯೂ ಹೆಚ್ಚಿರುತ್ತದೆ. ಆದ್ದರಿಂದ ಮಕ್ಕಳ ಸಹಾಯವಾಣಿ ಸಂಖ್ಯೆ 1098ನ್ನು ಹೆಚ್ಚು ಪ್ರಚಾರಗೊಳಿಸಬೇಕು. ಇದು ದಿನದ 24 ಗಂಟೆಗಳಲ್ಲೂ ಕಾರ್ಯ ನಿರ್ವಹಿಸಬೇಕು’ ಎಂದು ತಿಳಿಸಿದರು.

‘ಕೋವಿಡ್ ತಡೆಗೆ ಕರ್ಫ್ಯೂ ಜಾರಿಯಲ್ಲಿರುವಾಗ ಬಾಲ್ಯ ವಿವಾಹಗಳು ನಡೆಯುವ ಸಾಧ್ಯತೆಗಳಿವೆ. ಇದರ ಬಗ್ಗೆ ನಿಗಾ ಇಟ್ಟು ತಡೆಗಟ್ಟಬೇಕು. ಶಾಲೆಗಳಿಗೆ ರಜೆ ಇರುವ ಕಾರಣ ಬಾಲ ಕಾರ್ಮಿಕರು ಹೆಚ್ಚಾಗುವ ಸಂಭವವಿದೆ. ಇಂತಹ ಮಕ್ಕಳ ಮಾಹಿತಿ ತಿಳಿದು ಬಂದಲ್ಲಿ ಸಾರ್ವಜನಿಕರು ಕೂಡ ಮಕ್ಕಳ ಸಹಾಯವಾಣಿಗೆ ಮತ್ತು ಮಕ್ಕಳು ಆಪ್ತ ಸಮಾಲೋಚನೆ ಬಯಸಿದಲ್ಲಿ 14499 ಸಂಖ್ಯೆಯನ್ನು ಸಂಪರ್ಕಿಸಬಹುದು. ಈ ಕುರಿತು ಅಂಗನವಾಡಿ ಕಾರ್ಯಕರ್ತೆಯರ ಜೊತೆ ಸಭೆ ನಡೆಸಿ ಅವರಿಗೆ ಮಾಹಿತಿ ನೀಡಬೇಕು’ ಎಂದು ನಿರ್ದೇಶನ ನೀಡಿದರು.

‘ಕೋವಿಡ್-19ನಿಂದ ಗಂಡನನ್ನು ಕಳೆದುಕೊಂಡು ಅಸಹಾಯಕಳಾದ ಒಂಟಿ ಮಹಿಳೆಗೂ ಸಹಾಯ ಒದಗಿಸಬೇಕು. ಇದಕ್ಕಾಗಿ ಮಹಿಳೆಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರನ್ನು ಸಂಪರ್ಕಿಸಿ ಸಹಾಯ ಪಡೆಯಬಹುದು’ ಎಂದು ಹೇಳಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಜಿ.ಪದ್ಮಾವತಿ ಹಾಗೂ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ ಇದ್ದರು. 

ಸಂಪರ್ಕ ಸಂಖ್ಯೆಗಳು:

ಸಂತ್ರಸ್ತ ಮಕ್ಕಳ ಮಾಹಿತಿ ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅಥವಾ ಸಿಬ್ಬಂದಿಯ ಮೊಬೈಲ್ ಫೋನ್‌ಗೆ ಸಂಪರ್ಕಿಸಬಹುದು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ 70196 17252, ಯಲ್ಲಾಪುರ ಹಾಗೂ ಮುಂಡಗೋಡ ತಾಲ್ಲೂಕು ಮಕ್ಕಳ ರಕ್ಷಣಾಧಿಕಾರಿ ಮಹೇಶ ಮುಕ್ರಿ 73491 13913/ 94816 52085, ಶಿರಸಿ ಮತ್ತು ಸಿದ್ದಾಪುರ ವಿಶ್ವನಾಥ ಅಶೋಕ ನಾಯಕ 99646 42131, ಜೊಯಿಡಾ ಕಾನೂನು ಕಂ ಪ್ರೊಬೆಷನ್ ಅಧಿಕಾರಿ ದೇವಿದಾಸ ಎನ್.ನಾಯ್ಕ 99800 46094 ಸಂಪರ್ಕಿಸಬಹುದು.

ಹಳಿಯಾಳ ತಾಲ್ಲೂಕಿನಲ್ಲಿ ಆಪ್ತ ಸಮಾಲೋಚಕ ಸುನೀಲ್ ಚಂದ್ರು ಗಾಂವಕರ್ 77604 46889, ಕಾರವಾರ ಹೊನ್ನಾವರದ ಸಮಾಜ ಕಾರ್ಯಕರ್ತೆ ಸ್ಮಿತಾ ರಾಘವೇಂದ್ರ ಗಾಂವಕರ 81972 20755, ಅಂಕೋಲಾ ಕುಮಟಾದ ಸಮಾಜ ಕಾರ್ಯಕರ್ತೆ ನಂದಿನಿ ಪ್ರಶಾಂತ ಮಹಾಲೆ 99647 07049 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು