ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಟ್ಕಳ ವಿ.ಎಸ್.ಎಸ್ ಬ್ಯಾಂಕ್‌ಗೆ ₹89.65 ಲಕ್ಷ ಲಾಭ

Published : 16 ಸೆಪ್ಟೆಂಬರ್ 2024, 14:10 IST
Last Updated : 16 ಸೆಪ್ಟೆಂಬರ್ 2024, 14:10 IST
ಫಾಲೋ ಮಾಡಿ
Comments

ಭಟ್ಕಳ: ಭಟ್ಕಳ ವಿ.ಎಸ್.ಎಸ್ ಸಹಕಾರಿ ಸಂಘವು 2023-24ನೇ ಸಾಲಿನಲ್ಲಿ ₹89.65 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಶೇರುದಾರರಿಗೆ ಶೇ 7ರಷ್ಟು ಡಿವಿಡೆಂಟ್ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಈರಪ್ಪ ಗರ್ಡೀಕರ್ ಹೇಳಿದರು.

ಪುರವರ್ಗದ ಕಾಸ್ಮುಡಿ ಹನುಮಂತ ಸಭಾಭವನದಲ್ಲಿ ಇತ್ತೀಚೆಗೆ ನಡೆದ 58ನೇ ವಾರ್ಷಿಕ ಷೇರುದಾರರ ಸಭೆಯಲ್ಲಿ ಅವರು ಮಾತನಾಡಿದರು.

‘ಕಳೆದ ಸಾಲಿನಲ್ಲಿ ಸಂಘದಲ್ಲಿ ₹38.51 ಲಕ್ಷ ಶೇರು ಬಂಡವಾಳ ಹೊಂದಿದೆ. ಕಳೆದ ಸಾಲಿನ ಅಂತ್ಯಕ್ಕೆ ಸಂಘದ ಠೇವು ₹52.81 ಕೋಟಿ ಆಗಿದ್ದು, ಗಣನೀಯ ಏರಿಕೆ ಕಂಡಿದೆ’ ಎಂದರು.

‘ಸಂಘದಿಂದ ಗ್ರಾಹಕರ ಅನುಕೂಲಕ್ಕಾಗಿ ₹65.80 ಕೋಟಿ ಸಾಲವನ್ನು ವಿತರಣೆ ಮಾಡಲಾಗಿದೆ. ಸಾಲ ವಸೂಲಾತಿ ಪ್ರಮಾಣ ಶೇ 90ರಷ್ಟಿದ್ದು, ಸಕಾಲದಲ್ಲಿ ಗ್ರಾಹಕರು ಸಾಲ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಕೈಜೋಡಿಸಿ’ ಎಂದರು.

‘ಸಂಘವು ಆರ್ಥಿಕ ಚಟುವಟಿಕೆ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿಯೂ ಹೆಜ್ಜೆ ಇರಿಸಿದ್ದು, ಚೌಥನಿ ಹಾಗೂ ಪುರವರ್ಗ ಸರ್ಕಾರಿ ಶಾಲೆಗಳಿಗೆ ಅಂದಾಜು ₹1.30ಲಕ್ಷ ವೆಚ್ಚದ 20 ಡೆಸ್ಕ್‌ ಹಾಗೂ ಬೆಂಚನ್ನು ದೇಣಿಗೆಯಾಗಿ ನೀಡಲಾಗುತ್ತಿದೆ’ ಎಂದರು.

ಸಂಘದ ಉಪಾಧ್ಯಕ್ಷ ರಾಜೇಶ ದೇವಾಡಿಗ, ನಿರ್ದೇಶಕರಾದ ಪರಮೇಶ್ವರ ನಾಯ್ಕ, ವೆಂಕಟ್ರಮಣ ಮೊಗೇರ, ಗಣೇಶ ನಾಯ್ಕ, ಮಾದೇವ ನಾಯ್ಕ, ಗಣಪತಿ ನಾಯ್ಕ, ಶ್ರೀನಿವಾಸ ನಾಯ್ಕ, ಶ್ರೀಧರ ನಾಯ್ಕ, ದಿನೇಶ ಗೊಂಡ, ವಿಲಿಯಂ ಲೂಯಿಸ್, ನೀಲಾ ನಾಯ್ಕ, ಚಂದ್ರಿಕಾ ನಾಯ್ಕ ಇದ್ದರು. ಪ್ರಧಾನ ವ್ಯವಸ್ಥಾಪಕ ರಮೇಶ ನಾಯ್ಕ ವರದಿ ವಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT