ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೆಸಿಬಿ ಡಿಕ್ಕಿ: ಇಬ್ಬರಿಗೆ ಗಾಯ

Published : 11 ಆಗಸ್ಟ್ 2024, 15:52 IST
Last Updated : 11 ಆಗಸ್ಟ್ 2024, 15:52 IST
ಫಾಲೋ ಮಾಡಿ
Comments

ಕುಮಟಾ: ತಾಲ್ಲೂಕಿನ ವಾಲಗಳ್ಳಿ ಸಮೀಪದ ಹಾರೋಡಿ ಕ್ರಾಸ್ ಬಳಿ ಶನಿವಾರ ಜೆ.ಸಿ.ಬಿ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಸವಾರ ಹಾಗೂ ಹಿಂಬದಿ ಸವಾರ ಗಾಯಗೊಂಡಿದ್ದಾರೆ.

ಹೊನ್ನಾವರ ತಾಲ್ಲೂಕಿನ ಹೊದ್ಕೆಶಿರೂರು ಗ್ರಾಮದ ಕೂಲಿ ಕಾರ್ಮಿಕರಾದ ಮಂಜುನಾಥ ಹನುಮಂತ ನಾಯ್ಕ ಹಾಗೂ ಮಂಜುನಾಥ ನಾಗಪ್ಪ ನಾಯ್ಕಗಾಯಗೊಂಡವರು.

ಜೆ.ಸಿ.ಪಿ ಚಾಲಕ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಿದಾನಂದ ಕುಂಬಾರ ಆರೋಪಿಯಾಗಿದ್ದು,  ಹೊನ್ನಾವರ ತಾಲ್ಲೂಕಿನ ಚಂದಾವರ ಕಡೆಯಿಂದ  ನಂಬರ್ ಪ್ಲೇಟ್ ಅಳವಡಿಸದ ಹೊಸ ಜೆ.ಸಿ.ಬಿ ವಾಹನ ಚಲಾಯಿಸಿಕೊಂಡು ಕುಮಟಾ ಕಡೆಗೆ ಬರುವಾಗ ಎದುರು ಬಂದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪ್ರಕರಣ ದಾಖಲಿಸಿರುವ ಕುಮಟಾ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT