ಅಂಕೋಲಾ: ‘ಅಂತರರಾಷ್ಟ್ರೀಯ ಲಯನ್ಸ್ ಕ್ಲಬ್ನ ಭಾಗವಾಗಿರುವ ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿ ಈ ವರ್ಷ ತನ್ನ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿದ್ದು, ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿಯ ಅಧ್ಯಕ್ಷ ದೇವಾನಂದ ಬಿ.ಗಾಂವಕರ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ಳಿಹಬ್ಬದ ಸವಿನೆನಪಿಗೆ ಏಪ್ರಿಲ್ 5ರಂದು ಬೆಳ್ಳಿಹಬ್ಬದ ಮಿಂಚು ಕಾರ್ಯಕ್ರಮದಡಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಬೊಮ್ಮು ಗೌಡರವರ ನೆನಪಿಗೆ ಬೇಲೇಕೇರಿ ಕಡಲ ತೀರದಲ್ಲಿ 2 ಆಸನವುಳ್ಳ ಜೋಕಾಲಿ ವ್ಯವಸ್ಥೆ, ಪ್ರಾಥಮಿಕ ಮತ್ತು ಮಧ್ಯಮಿಕ ಶಾಲೆಗಳಿಗೆ ಕಂಪ್ಯೂಟರ್, ಫ್ಯಾನ್, ಪೋಡಿಯಂ, ವಿಜ್ಞಾನ ಉಪಕರಣ, ಮೈಕ್ ಸೆಟ್ ವಿತರಣೆ, ಆಶ್ರಮ ವಾಸಿಗಳಿಗೆ ಊಟ ನೀಡುವ ಕಾರ್ಯಕ್ರಮವಿದೆ. ಬೆಳ್ಳಿಹಬ್ಬದ ನೆನಪಿಗಾಗಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು ಎಂದರು.

ಏಪ್ರಿಲ್ 5ರಂದು ಸಂಜೆ 4 ಘಂಟೆಗೆ ವಾಸುದೇವ ಕಲ್ಯಾಣ ಮಂಟಪ ಶೆಟಗೇರಿಯಲ್ಲಿ ಬೆಳ್ಳಿಹಬ್ಬದ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮವನ್ನು ಲಾಯನ್ಸ್ ಕ್ಲಬ್ ಮಾಜಿ ಜಿಲ್ಲಾ ಗವರ್ನರ್ ಪಿ.ಎಂ.ಜೆ.ಎಫ್ ದೇವೆಗೌಡ ಮೈಸೂರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಕೋಲಾ ಲಾಯನ್ಸ್ ಕ್ಲಬ್ ಕರಾವಳಿಯ ಅಧ್ಯಕ್ಷ ದೇವನಂದ ಗಾಂವಕರ ಬಾಸಗೋಡ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕ ಸತೀಶ ಸೈಲ್, ಹುಬ್ಬಳ್ಳಿಯ ಜಿಲ್ಲಾ ಗವರ್ನರ್ ಮನೋಜ ಮಾಣೆಕ್, ಮಣಿಪಾಲದ ಜಿಲ್ಲಾ ಗವರ್ನರ್ ಮೊಹಮ್ಮದ ಹನೀಫ್, ಮುಂಬೈ ಜಿಲ್ಲಾ ಗವರ್ನರ್ ಮಾಣೇಶ್ವರ ಎಚ್. ನಾಯಕ, ಪ್ರಮುಖರಾದ ರವಿ ಹೆಗಡೆ ಸಿದ್ದಾಪುರ, ಗಣಪತಿ ನಾಯಕ ಗೋಕರ್ಣ. ಮೋನಿಕಾ ಸಾವಂತ ಬೆಳಗಾವಿ, ಗಿರೀಶ ಕುಚನಾಡ ಕುಮಟಾ, ಜಿಲ್ಲಾ ಉಪಾಧ್ಯಕ್ಷರಾದ ಅಮೋಲ ನಾಯ್ಕ ವಾಸ್ಕೋ, ರಾಜಶೇಖರ ಹೀರೆಮಠ ಬೆಳಗಾವಿ, ರಿಜನ್ ಚೇರ್ ಪರ್ಸನ್ ರವೀಂದ್ರ ನಾಯ್ಕ ಗೋಕರ್ಣ, ರೋನ್ ಚೇರ್ ಪರ್ಸನ್ ಅಶೋಕ ಹೆಗಡೆ ಶಿರಸಿ ಆಗಮಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ ನಾಯಕ, ಎಸ್.ಆರ್.ಉಡುಪಿ, ಮಂಜುನಾಥ ಹರಿಕಂತ್ರ, ಗಿರಿಧರ ಆಚಾರ್ಯ, ರಮೇಶ ಪರಮಾರ್, ಕರುಣಾಕರ ನಾಯ್ಕ ಹಾಗೂ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.