ಹೊನ್ನಾವರ: ತಾಲ್ಲೂಕಿನ ಅಪ್ಸರಕೊಂಡದಿಂದ ಮುಗಳಿವರೆಗಿನ 8.21 ಕಿ.ಮೀ ವ್ಯಾಪ್ತಿಯ ಸಮುದ್ರ ತೀರ ಪ್ರದೇಶವನ್ನು ಅಪ್ಸರಕೊಂಡ-ಮುಗಳಿ ಕಡಲ ವನ್ಯಜೀವಿ ಧಾಮ ಎಂದು ಘೋಷಣೆ ಮಾಡಲಾಗಿದ್ದು ಈ ಕುರಿತಂತೆ ರಾಜ್ಯ ಸರ್ಕಾರ ಜೂನ್ 24ರಂದು ಅಧಿಸೂಚನೆ ಹೊರಡಿಸಿದೆ.

ಪ್ರಸ್ತುತ ಘೋಷಣೆಯೊಂದಿಗೆ ಅಪ್ಸರಕೊಂಡ-ಮುಗಳಿ ಕಡಲ ವನ್ಯಜೀವಿ ಧಾಮ ರಾಜ್ಯದಲ್ಲೇ ಪ್ರಥಮ ಕಡಲ ವನ್ಯಜೀವಿ ಧಾಮ ಎಂಬ ಹೆಗ್ಗಳಿಗೆ ಪಾತ್ರವಾಗಿದೆ.

835.02 ಹೆಕ್ಟೇರ್ ಕಿರು ಅರಣ್ಯ ಪ್ರದೇಶ ಹಾಗೂ ತೀರದಿಂದ 6 ಕಿ.ಮೀ ದೂರ ವ್ಯಾಪ್ತಿಯ ಅರಬ್ಬೀ ಸಮುದ್ರ ಸೇರಿ ಒಟ್ಟು 5959.322 ಹೆಕ್ಟೇರ್ ವಿಸ್ತೀರ್ಣದ ಪ್ರದೇಶವನ್ನೊಳಗೊಂಡ ಪ್ರಸ್ತುತ ವನ್ಯಜೀವಿ ಧಾಮ ಸಮುದ್ರ ಸವತೆ, ಹವಳ, ವಿವಿಧ ಜಾತಿಯ ಶಾರ್ಕ್, ತಿಮಿಂಗಲ ಮೊದಲಾದ ಜೀವಿಗಳನ್ನೊಳಗೊಂಡಿರುವ ಜೊತೆಗೆ ಇಲ್ಲಿನ ಜಾಗವನ್ನು ಆಲಿವ್ ರಿಡ್ಲಿ ಕಡಲಾಮೆಗಳು ಮೊಟ್ಟೆಯಿಡುವ ಪ್ರದೇಶವೆಂದು ಗುರುತಿಸಲಾಗಿದೆ.

ಕಂದಾಯ ಹಾಗೂ ಖಾಸಗಿ ಭೂಮಿ ವನ್ಯಜೀವಿ ಧಾಮದ ವ್ಯಾಪ್ತಿಗೆ ಬರುವುದಿಲ್ಲ ಹಾಗೂ ಸಾಂಪ್ರದಾಯಿಕವಾಗಿ ಬಂದಿರುವ ದಾರಿ, ನೀರು ಹಾಗೂ ಮೀನುಗಾರಿಕೆ ಹಕ್ಕುಗಳು ಯಥಾ ಸ್ಥಿತಿಯಲ್ಲಿ ಮುಂದುವರಿಯುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.