ಕಾರವಾರ: ‘ಕೌಟುಂಬಿಕ ಸಮಸ್ಯೆ ಪರಿಹರಿಸಿಕೊಡುವುದಾಗಿ ಒಟ್ಟು ₹ 43 ಸಾವಿರ ಪಡೆದು ವಂಚನೆ ಮಾಡಿದ್ದಾರೆ’ ಎಂದು ಜ್ಯೋತಿಷಿಯೊಬ್ಬರ ವಿರುದ್ಧ ಇಲ್ಲಿನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿಯ ರಾಮಚಂದ್ರ ಭಟ್ಟ ಎನ್ನುವವರ ವಿರುದ್ಧ ದೂರು ದಾಖಲಾಗಿದೆ. ನಗರದ ಬಾಡದ ದಿಲೀಪ ನಾಯ್ಕ ಎನ್ನುವವರು ದೂರುನೀಡಿದ್ದಾರೆ.

‘ರಾಮಚಂದ್ರ ಅವರು, ‘ಮನೆಯಲ್ಲಿ ತೊಂದರೆ, ಸತಿ– ಪತಿ ಕಲಹ, ಮಕ್ಕಳ ವಿದ್ಯಾಭ್ಯಾಸದ ತೊಂದರೆ ಇದ್ದಲ್ಲಿ ಮೊಬೈಲ್ ಸಂಖ್ಯೆಗೆ ಕರೆಮಾಡಿ. ನಿಮ್ಮ ಸಮಸ್ಯೆಯನ್ನು ಎರಡು– ಮೂರು ದಿನಗಳಲ್ಲಿ ಪರಿಹಾರ ಮಾಡಿಸಿಕೊಡುತ್ತೇನೆ’ ಎಂದು ಏ.6ರಂದು ‘ಇ– ಡಿಜಿಟಲ್’ ಟಿವಿ ಚಾನಲ್‌ನಲ್ಲಿ ಜಾಹೀರಾತು ನೀಡಿದ್ದರು. ಅದರಂತೆ ಕೌಟುಂಬಿಕ ಸಮಸ್ಯೆಯ ಪರಿಹಾರಕ್ಕಾಗಿ ಅವರನ್ನು ಸಂಪರ್ಕಿಸಿದ್ದೆ’ ಎಂದು ದಿಲೀಪ ನಾಯ್ಕ ವಿವರಿಸಿದ್ದಾರೆ.

‘ಮಧುಸೂದನ ಎಂಬ ಹೆಸರಿನ ವ್ಯಕ್ತಿಯ ಎಸ್‌ಬಿಐ ಉಡುಪಿ ಶಾಖೆಯ ಖಾತೆ ಸಂಖ್ಯೆಗೆ ಅಂದು₹ 8,500 ಜಮಾ ಮಾಡಲು ತಿಳಿಸಿದ್ದರು. ಅದರಂತೆ ಹಣ ಜಮಾ ಮಾಡಿದ ನಂತರ ವಶೀಕರಣ ಮಾಡಿದ ತಾಯತ ಹಾಗೂ ಕುಂಕುಮವನ್ನು ಕೊರಿಯರ್ ಮೂಲಕ ಕಳುಹಿಸಿಕೊಟ್ಟಿದ್ದರು. ಸಮಸ್ಯೆ ಪರಿಹಾರವಾಗದೇ ಮತ್ತೆ ಸಂಪರ್ಕಿಸಿದಾಗ, ಸಮಸ್ಯೆ ಪೂರ್ತಿಯಾಗಿ ಸರಿಪಡಿಸಬೇಕೆಂದರೆ ಇನ್ನೂ₹ 34,500 ಹಣವನ್ನು ನೀಡಬೇಕು ಎಂದು ತಿಳಿಸಿದ್ದರು. ಅದರಂತೆ ಆ ಹಣವನ್ನೂ ಜಮಾ ಮಾಡಿದ್ದೆ’ ಎಂದು ತಿಳಿಸಿದ್ದಾರೆ.

‘ಇಷ್ಟಾದರೂಸಮಸ್ಯೆ ಪರಿಹಾರ ಆಗಲಿಲ್ಲ. ರಾಮಚಂದ್ರ ಅವರು ನನ್ನಿಂದ ಹಣ ಪಡೆದು, ನಂಬಿಸಿ ಮೋಸ ಮಾಡಿದ್ದಾರೆ’ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.