ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಯಿಡಾ| ವಾರಂಟಿ ಇಲ್ಲದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ ವಿತರಣೆ : ಸುನೀಲ ಹೆಗಡೆ

ಬಿಜೆಪಿ ಮುಖಂಡ ಸುನೀಲ ಹೆಗಡೆ ಲೇವಡಿ
Last Updated 19 ಮಾರ್ಚ್ 2023, 14:18 IST
ಅಕ್ಷರ ಗಾತ್ರ

ಜೋಯಿಡಾ: ‘ಕಾಂಗ್ರೆಸ್ ಧರ್ಮ, ಜಾತಿ ಭೇದ ರಾಜಕಾರಣ ಮಾಡುವ ಪಕ್ಷ. ವಾರಂಟಿಯೆ ಇಲ್ಲದ ಗ್ಯಾರಂಟಿ ಪತ್ರವನ್ನು ಜನರಿಗೆ ವಿತರಿಸುತ್ತಿದೆ’ ಎಂದು ಬಿಜೆಪಿ ಮುಖಂಡ ಸುನೀಲ ಹೆಗಡೆ ಲೇವಡಿ ಮಾಡಿದರು.

ಜೊಯಿಡಾದಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಚುನಾವಣೆ ಸಮೀಪಿಸಿದಾಗ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವ ಶಾಸಕ ಆರ್.ವಿ. ದೇಶಪಾಂಡೆ ಹಲವು ವರ್ಷ ಉಸ್ತುವಾರಿ ಸಚಿವರಾಗಿ ಅಧಿಕಾರದಲ್ಲಿದ್ದಾಗ ತಾಲ್ಲೂಕಿನ ಅಭಿವೃದ್ಧಿ ಮಾಡಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ್ ರೇಡ್ಕರ್, ‘ಹಿಂದುಳಿದ ತಾಲ್ಲೂಕು ಎಂದು ಹಣೆಪಟ್ಟಿ ಬರಲು ಶಾಸಕ ಆರ್.ವಿ.ದೇಶಪಾಂಡೆ ಕಾರಣ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ನಡೆದ ಕಾಮಗಾರಿಗಳನ್ನು ಇವರೇ ಉದ್ಘಾಟಿಸಿ ಕಳಪೆ ಎಂದು ದೂರುತ್ತಾರೆ’ ಎಂದರು.

ಕುಣಬಿ ಸಮುದಾಯದ ತಾಲ್ಲೂಕಾಧ್ಯಕ್ಷ ಅಜೀತ ಮೀರಾಶಿ, ‘ಶಾಸಕ ಆರ್.ವಿ.ದೇಶಪಾಂಡೆ ನಲ್ವತ್ತು ವರ್ಷಗಳಿಂದ ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುತ್ತೇನೆ ಎಂದು ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ’ ಎಂದರು.

ಸುಮಾರು 50 ಹೆಚ್ಚು ಜನರು ಬಿಜೆಪಿಗೆ ಸೇರ್ಪಡೆಗೊಂಡರು. ಗೋವಾ ಬಿಜೆಪಿ ಮುಖಂಡ ಸುಭಾಷ್ ವೆಳಿಪ, ಮರಾಠಾ ಸಮಾಜದ ತಾಲ್ಲೂಕಾಧ್ಯಕ್ಷ ಚಂದ್ರಕಾಂತ ದೇಸಾಯಿ, ಆರ್.ವಿ. ದಾನಗೇರಿ, ಸುಷ್ಮಾ ಮೀರಾಶಿ, ಸಂತೋಷ್ ದೇಸಾಯಿ, ಸುಭಾಷ್ ಮಾಂಜ್ರೇಕರ, ಜೊಯಿಡಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅರುಣ್ ಕಾಮ್ರೇಕರ್, ಗಾಂಗೋಡಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಬ್ರಾಯ ಹೆಗಡೆ, ವಾಣಿ ಪೈ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT