ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್.ಪಿ.ಜಿ‌ ದರ ಏರಿಕೆ: ಸೌದೆ ಒಲೆ ಉರಿಸಿ ಕಾಂಗ್ರೆಸ್ ಪ್ರತಿಭಟನೆ

Last Updated 4 ಮಾರ್ಚ್ 2023, 7:51 IST
ಅಕ್ಷರ ಗಾತ್ರ

ಶಿರಸಿ: ನಗರದ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಕಟ್ಟಿಗೆ ಒಲೆ ಬೆಂಕಿಯಲ್ಲಿ ಅಕ್ಕಿ ಬೇಯಿಸುವ ಮೂಲಕ
ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯನ್ನು ಕಾಂಗ್ರೆಸ್ಸಿಗರು ಖಂಡಿಸಿದರು.

ಶನಿವಾರ ಶಿರಸಿ ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ನಡೆದ ಪ್ರತಿಭಟನೆ ನೇತೃತ್ವ ವಹಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಭೀಮಣ್ಣ ನಾಯ್ಕ ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿದರು. ದಿನ ಬಳಕೆ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಜೀವನ ನಿರ್ವಹಣೆ ಕಷ್ಟವಾಗಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡ ಜನರಿಗೆ ಸಬ್ಸಿಡಿ ಮೂಲಕ ಗ್ಯಾಸ್ ಸಿಲಿಂಡರ್ ಒದಗಿಸಲಾಗಿತ್ತು. ಜನರು ನೆಮ್ಮದಿಯಿಂದ ಇದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜನರು ಕಷ್ಟಕ್ಕೆ ಸಿಲುಕಿದ್ದಾರೆ‌.

ಮೋದಿಯವರಿಗೆ ಕಣ್ಣು ಇಲ್ಲ. ಬೆಲೆ ಏರಿಕೆ ಕಾಣುತ್ತಿಲ್ಲ. ಧರ್ಮದ ಹೆಸರಲ್ಲಿ ರಾಜಕಾರಣ ಮಾಡುವ ಬಿಜೆಪಿಗರಿಗೆ ರೈತರು, ಬಡವರು, ಜನಸಾಮಾನ್ಯರ ಗೋಳು ಕಾಣದಂತಾಗಿದೆ ಎಂದು ಟೀಕಿಸಿದರು.

ದೇಶದ ಭವಿಷ್ಯ, ಜನರಿಗೆ ನೆಮ್ಮದಿ ಬೇಕಾದರೆ ಬಿಜೆಪಿ ತೊಲಗಬೇಕು ಹಾಗೂ ಕಾಮನ ಗ್ರ ಅಧಿಕಾರಕ್ಕೆ ಬರಬೇಕು ಎಂದ ಅವರು,ತಕ್ಷಣ ಬೆಲೆ ಇಳಿಕೆ ಮಾಡದೆ ದ್ದರೆ ಇನ್ನಷ್ಟು ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪ್ರಮುಖರಾದ ರವೀಂದ್ರ ನಾಯ್ಕ, ಬಸವರಾಜ ದೊಡ್ಮನಿ, ಎಸ್.ಕೆ.ಭಾಗವತ, ಸಂತೋಷ ಶೆಟ್ಟಿ, ಗಣೇಶ ದಾವಣಗೆರೆ, ವೆಂಕಟೇಶ ಹೆಗಡೆ, ಶ್ರೀಪಾದ ಹೆಗಡೆ, ಮಹೇಶ ಶೆಟ್ಟಿ, ಸಿ.ಎಫ್.ನಾಯ್ಕ, ಜಗದೀಶ ಗೌಡ, ಜ್ಯೋತಿ ಗೌಡ, ಗೀತಾ ಭೋವಿ, ಗಾಯತ್ರಿ ನೇತ್ರೇಕರ, ವನಿತಾ ಶೆಟ್ಟಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT