ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊರೊನಾ ಕಿಟ್’ ನಿರಂತರ ತಯಾರಿಕೆ

ಭಟ್ಕಳದ ಬೆಳಕೆಯಲ್ಲಿ ತಯಾರಾಗುತ್ತಿವೆ ವೈಯಕ್ತಿಕ ರಕ್ಷಣಾ ಕಿಟ್‌ಗಳು
Last Updated 2 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಭಟ್ಕಳ: ಕೊರೊನಾ ವೈರಸ್‌ತಡೆಗಟ್ಟಲು ಅವಿರತ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಅಗತ್ಯವಾಗಿರುವ ‘ವೈಯಕ್ತಿಕ ಸುರಕ್ಷತಾ ಸಲಕರಣೆ’ಯನ್ನು (ಪಿ.ಪಿ.ಇ)ತಾಲ್ಲೂಕಿನ ಬೆಳಕೆ ಗ್ರಾಮದಲ್ಲಿ ತಯಾರಿಸಲಾಗುತ್ತಿದೆ.

ಗ್ರಾಮದ ಕಾನಮದ್ಲು ರಸ್ತೆಯಲ್ಲಿ ಇರುವ ‘ಧ್ರುತಿ ಸರ್ಜಿಕಲ್ ಸೊಲ್ಯೂಶನ್’ಕಾರ್ಖಾನೆಯಲ್ಲಿದಿನದ 24 ತಾಸೂ ಕೊರೊನಾ ರಕ್ಷಣಾ ಕಿಟ್ಸಿದ್ಧಪಡಿಸಲಾಗುತ್ತಿದೆ.ಭಟ್ಕಳವೂ ಸೇರಿದಂತೆ ದೇಶದ ವಿವಿಧೆಡೆ ಕೊರೊನಾ ವೈರಸ್ ಮಹಾಮಾರಿಯಾಗಿ ಸಾಗುತ್ತಿದೆ. ಕೋವಿಡ್ 19 ಪೀಡಿತರ ಚಿಕಿತ್ಸೆಮಾಡುವವರು, ಅವರ ಆರೈಕೆ ಮಾಡುವವರು ಸಂಪೂರ್ಣ ಸುರಕ್ಷತೆಗಾಗಿ ಪಿ.ಪಿ.ಇ ಧರಿಸಬೇಕು. ಹಾಗಾಗಿ ಅವುಗಳಿಗೆ ಈಗ ಬೇಡಿಕೆಯೂ ಹೆಚ್ಚಾಗಿದೆ.

‘ಕೊರೊನಾ ತಡೆಯಲು ವೈದ್ಯಕೀಯ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ರಕ್ಷಣೆಯೂ ಎಲ್ಲರ ಹೊಣೆಯಾಗಿದೆ. ಅದಕ್ಕಾಗಿ ಪಿ.ಪಿ.ಇ ಅನ್ನು ಲಾಭದ ಉದ್ದೇಶ ಇಲ್ಲದೇ ತಯಾರಿಸಿ ಪೂರೈಸುತ್ತಿದ್ದೇವೆ. ಈ ಮೂಲಕ ಕೊರೊನಾ ಸೋಂಕನ್ನು ತಡೆಗಟ್ಟಲು ದೇಶಸೇವೆಯಲ್ಲಿ ನಮ್ಮಸಂಸ್ಥೆತೊಡಗಿಕೊಂಡಿದೆ’ ಎಂದುಕಾರ್ಖಾನೆಯಮಾಲೀಕ ಶರತ್ ಕುಮಾರ ಶೆಟ್ಟಿ ‘ಪ್ರಜಾವಾಣಿ’ಗೆತಿಳಿಸಿದರು.

‘ಬೇಡಿಕೆ ಈಡೇರಿಸುವುದೇ ಸವಾಲು’:‌‘ವೈದ್ಯಕೀಯ ಸಿಬ್ಬಂದಿ 24 ತಾಸೂದುಡಿಯುತ್ತಿರುವಂತೆ, ನಮ್ಮ ಸಿಬ್ಬಂದಿಯೂ ದಿನಪೂರ್ತಿ ಕೆಲಸ ಮಾಡುತ್ತಿದ್ದಾರೆ. ಎರಡು ತಿಂಗಳ ಹಿಂದೆ ಚೀನಾದಲ್ಲಿ ಕೊರೊನಾವೈರಸ್ಕಂಡುಬಂದಾಗಲೇ ಬೆಂಗಳೂರಿನಿಂದ ಬೇಡಿಕೆ ಬಂದಿತ್ತು.ಈಗಾಗಲೇ ಸುಮಾರು 25 ಸಾವಿರ ಕಿಟ್‌ಗಳನ್ನು ತಯಾರಿಸಿ ಪೂರೈಸಲಾಗಿದೆ. ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ, ಕಲಬುರ್ಗಿ, ಧಾರವಾಡ, ಸೇರಿದಂತೆ ವಿವಿಧ ಜಿಲ್ಲೆಗಳಿಂದ, ಹೊರ ರಾಜ್ಯಗಳಿಂದಲೂ ಬೇಡಿಕೆಯಿದೆ. ಅದನ್ನು ಪೂರೈಸುವುದೇ ದೊಡ್ಡ ಸವಾಲಾಗಿದೆ’ ಎಂದು ಶರತ್ ಕುಮಾರ ಶೆಟ್ಟಿ ಹೇಳಿದರು.

‘ಮೊದಲು ₹1,400 ಇದ್ದ ಕಿಟ್‌ಗೆ ಈಗ ₹1,500ರಿಂದ ₹1,600ರವರೆಗೆ ದರವಿದೆ. ಹೆಚ್ಚುವರಿಯಾಗಿ ಪಡೆದ ಹಣವನ್ನು ನಮ್ಮ ಫ್ಯಾಕ್ಟರಿಯಲ್ಲಿ ಹಗಲೂ ರಾತ್ರಿ ಕೆಲಸ ಮಾಡುವ ಸಿಬ್ಬಂದಿಗೆ ನೀಡಲಾಗುತ್ತಿದೆ. ಪ್ರಧಾನಮಂತ್ರಿ ಕಾರ್ಯಾಲಯದ ಆರೋಗ್ಯ ಆ್ಯಪ್‌ನಲ್ಲಿ ಈ ರಕ್ಷಣಾ ಕಿಟ್ ಬಗ್ಗೆ ಮಾಹಿತಿ ನೀಡಿದಾಗ, ಕಚ್ಚಾವಸ್ತುಗಳ ಕೊರತೆಯಾದರೆಪೂರೈಸುವ ಭರವಸೆದೊರೆತಿದೆ’ ಎಂದು ತಿಳಿಸಿದರು.

ಬೆಳಕೆ ಹಾಗೂ ಕುಂದಾಪುರದಲ್ಲಿರುವ ಸಂಸ್ಥೆಯ ಘಟಕಗಳಲ್ಲಿವಿತರಕರೂಸೇರಿದಂತೆ ಸುಮಾರು 150ಸಿಬ್ಬಂದಿಯಿದ್ದಾರೆ.ಹೀಗೆ ಒಟ್ಟಾಗಿ ಕೆಲಸ ಮಾಡುವ ಅನಿವಾರ್ಯತೆ ಇದೆ.ಅವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಲಾಗಿದೆ.

‘ದಿನಕ್ಕೆ ಮೂರು ಬಾರಿ ಥರ್ಮಾಮೀಟರ್ನಿಂದ ತಪಾಸಣೆ ನಡೆಸಲಾಗುತ್ತಿದೆ. ವಿಮೆ, ಅಗತ್ಯ ವಸ್ತುಗಳ ಪೂರೈಕೆ, ಹೆಚ್ಚುವರಿ ವೇತನವನ್ನೂ ನೀಡಲಾಗುತ್ತಿದೆ. ಕೊರೊನಾ ಪೀಡೆಯಿಂದ ದೇಶ ಮುಕ್ತವಾಗಲಿ ಎಂಬ ಆಶಯವೂ ನಮ್ಮದಾಗಿದೆ’ ಎಂದು ಶರತ್ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT