ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ | ಸಿದ್ದಾಪುರಕ್ಕೂ ತಲುಪಿದ ಕೋವಿಡ್ 19

Last Updated 27 ಮೇ 2020, 13:32 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಮೂವರು ಮಕ್ಕಳೂ ಸೇರಿದಂತೆ ಆರು ಜನರಿಗೆ ಕೋವಿಡ್ 19 ಬುಧವಾರ ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಒಂದು ವಾರದ ಹಿಂದೆ ವಾಪಸಾಗಿದ್ದ ಎಲ್ಲರೂ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದರು.

ಇದೇ ಮೊದಲ ಬಾರಿಗೆ ಸಿದ್ದಾಪುರ ತಾಲ್ಲೂಕಿನಲ್ಲೂ ಸೋಂಕು ಕಾಣಿಸಿಕೊಂಡಿದ್ದು, ಮಹಾರಾಷ್ಟ್ರದಿಂದ ಕುಟುಂಬ ಸಮೇತ ಮರಳಿದ್ದ 53 ವರ್ಷದ ವ್ಯಕ್ತಿಗೆ ಖಚಿತವಾಗಿದೆ. ಉಳಿದಂತೆ,ಯಲ್ಲಾಪುರದನಾಲ್ಕು ಮತ್ತು ಒಂಬತ್ತು ವರ್ಷದ ಬಾಲಕರು, 12 ವರ್ಷದ ಬಾಲಕಿ ಮತ್ತು 26 ವರ್ಷದ ಯುವಕ ಸೇರಿದ್ದಾರೆ. ಹೊನ್ನಾವರದ 24 ವರ್ಷದ ಯುವಕನಿಗೂ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಈವರೆಗೆ ದೃಢಪಟ್ಟಿರುವ ಒಟ್ಟು 75 ಪ್ರಕರಣಗಳಲ್ಲಿ 41 ಮಂದಿ ಗುಣಮುಖರಾಗಿದ್ದಾರೆ.ಪ್ರಸ್ತುತ34 ಸಕ್ರಿಯ ಪ್ರಕರಣಗಳಿದ್ದು,ಎಲ್ಲರೂ ಸೋಂಕುಲಕ್ಷಣ ರಹಿತವಾಗಿದ್ದಾರೆ. ಎಲ್ಲರ ಆರೋಗ್ಯ ಚೇತರಿಸಿಕೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೋಗಿ ಸಂಖ್ಯೆ; ವಯಸ್ಸು; ಲಿಂಗ
2284: 12:ಹೆಣ್ಣು
2291: 26: ಗಂಡು
2397: 24: ಗಂಡು
2398: 52: ಗಂಡು
2399: 9: ಗಂಡು
2400: 4: ಗಂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT