ನಿರಾಸೆ ತಂದ ಸಮಯದ ಮಿತಿ
ಈ ಮೊದಲು ನಗರದಲ್ಲಿ ರಾತ್ರಿ 12 ಗಂಟೆ ವರೆಗೆ ದಾಂಡಿಯಾ ಆಡಲು ಅವಕಾಶ ಇತ್ತು. ಆದರೆ, ಈ ವರ್ಷ ಪೋಲಿಸ್ ಇಲಾಖೆ ಆ ಸಮಯವನ್ನು 10 ಗಂಟೆಗೆ ಸೀಮಿತ ಮಾಡಿದ್ದು, ದಾಂಡಿಯಾ ಪ್ರಿಯರಿಗೆ ಬೇಸರ ತಂದಿದೆ. ಕಳೆದ ಐದು ದಿನ ಮಳೆ ಇಲ್ಲದ ಕಾರಣಕ್ಕೆ ದಾಂಡಿಯಾ ನೃತ್ಯ ತನ್ನ ಕಳೆ ಹೆಚ್ಚಿಸಿಕೊಂಡಿತ್ತು. ಆದರೆ, ನಿನ್ನೆಯಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯ ಕಾರಣಕ್ಕೆ ದಾಂಡಿಯಾ ವೇದಿಕೆಗೆ ಜನರು ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆಯೋಜಕರು ಹೇಳುತ್ತಾರೆ.