ಶಿರಸಿ: ರೈತರು ಹಾಗೂ ಗ್ರಾಹಕರನ್ನು ಜೋಡಿಸುವ ಹಾಫ್ಕಾಮ್ನಲ್ಲಿ ಹಲಸು ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಒದಗಿಸಬೇಕು. ಹಾಫ್ಕಾಮ್ ವ್ಯವಸ್ಥೆ ಪುನಶ್ಚೇತನವಾಗಬೇಕು. ರಾಜ್ಯದ ಜೀವವೈವಿಧ್ಯ ಮಂಡಳಿ ಅರಣ್ಯ ಇಲಾಖೆ ಸಂಶೋಧನಾ ವಿಭಾಗಗಳು ಹಲಸು ವೈವಿಧ್ಯ ತಳಿ ಸಂರಕ್ಷಣೆಗೆ ರೈತರ ಸಹಭಾಗಿತ್ವದ ಜೀನ್ ಬ್ಯಾಂಕ್ನ್ನು ಶಿರಸಿಯಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ನಿರ್ಣಯಗಳನ್ನು ಹಲಸಿನ ಮೇಳದಲ್ಲಿ ಕೈಗೊಳ್ಳಲಾಯಿತು.

ಎರಡು ದಿನ ನಡೆದ ಹಲಸಿನ ಮೇಳದಲ್ಲಿ ಶುಕ್ರವಾರ ಸಂಜೆಯ ಸಮಾರೋಪದಲ್ಲಿ ವೃಕ್ಷಲಕ್ಷ ಆಂದೋಲನದ ಸಂಚಾಲಕ ಅನಂತ ಅಶೀಸರ ನಿರ್ಣಯ ಮಂಡಿಸಿದರು. ತೋಟಗಾರಿಕಾ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರಗಳು, ತೋಟಗಾರಿಕಾ ವಿಶ್ವ ವಿದ್ಯಾಲಯಗಳು ಹಲಸು ಮಲೆನಾಡಿನ ಪ್ರಮುಖ ಉಪ ಬೆಳೆ ಎಂಬುದನ್ನು ಅಧಿಕೃತವಾಗಿ ಘೋಷಿಸಬೇಕು. ಹಲಸು ತಳಿ ವೈವಿಧ್ಯ ಹೆಚ್ಚಿಸಲು, ಗುರುತಿಸಲು, ರೈತರ ಸಹಭಾಗಿತ್ವದ ಪ್ರಯೋಗ ಅಧ್ಯಯನಗಳನ್ನು ನಡೆಸಲು ಯೋಜನೆ ರೂಪಿಸಬೇಕು. ತೋಟಗಾರಿಕೆ ಮತ್ತು ಅರಣ್ಯ ಇಲಾಖೆಗಳು ತಮ್ಮ ನರ್ಸರಿಗಳಲ್ಲಿ ಒಂದು ಲಕ್ಷ ಉತ್ತಮ ಹಲಸಿನ ತಳಿಗಳ ಗಿಡಗಳನ್ನು ತಯಾರಿಸಿ ರೈತರಿಗೆ ವಿತರಣೆ ಮಾಡಬೇಕು. ಮಾವು, ಗೇರು, ಲಿಂಬೆ ಅಭಿವೃದ್ಧಿ ಮಂಡಗಳಿಗಳಿವೆ. ಅದರಂತೆ ಹಲಸು ಸುಸ್ಥಿರ ಅಭಿವೃದ್ಧಿಗೆ ಮಂಡಳಿ ರಚಿಸಬೇಕು ಎಂದು ಒತ್ತಾಯಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರಮುಖರಾದ ಶಂಭುಲಿಂಗ ಹೆಗಡೆ, ಸತೀಶ ಹೆಗಡೆ, ದಿವಾಕರ ಕೆರೆಹೊಂಡ, ರೂಪಾ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.