ಕಾರವಾರ: ಈ ಬಾರಿಯ ‘ಸ್ವಚ್ಛ ಸರ್ವೇಕ್ಷಣಾ ಅಭಿಯಾನ’ದ ಸಮೀಕ್ಷೆಯಲ್ಲಿ ಜಿಲ್ಲೆಯ ನಗರ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳ ರ್ಯಾಂಕಿಂಗ್ ಗಣನೀಯವಾಗಿ ಏರಿಕೆಯಾಗಿದೆ. ದಕ್ಷಿಣ ಭಾರತ ವಲಯದ ಪಟ್ಟಿಯಲ್ಲಿ ಮೇಲಿನ ಸಾಲಿನಲ್ಲೇ ಹೆಸರು ದಾಖಲಿಸಿಕೊಂಡಿವೆ.

50 ಸಾವಿರದಿಂದ 1 ಲಕ್ಷ ಜನಸಂಖ್ಯೆ ಇರುವ ನಗರಗಳ ಪೈಕಿ ಶಿರಸಿಯು 23ನೇ ಸ್ಥಾನದಲ್ಲಿದೆ. ಕಾರವಾರ 57ನೇ ಹಾಗೂ ದಾಂಡೇಲಿಯು 145ನೇ ಸ್ಥಾನ ಪಡೆದುಕೊಂಡಿದೆ. 25 ಸಾವಿರದಿಂದ 50 ಸಾವಿರದ ಒಳಗೆ ಜನಸಂಖ್ಯೆ ಇರುವ ನಗರಗಳ ರ್ಯಾಂಕಿಂಗ್ನಲ್ಲೂ ಭಾರಿ ಸುಧಾರಣೆ ಕಂಡಿದೆ. ಹಳಿಯಾಳ ಪುರಸಭೆಯು 23, ಕುಮಟಾ ಪುರಸಭೆಯು 50, ಭಟ್ಕಳ ಪುರಸಭೆಯು 52 ಹಾಗೂ ಅಂಕೋಲಾ ಪುರಸಭೆಯು 53ನೇ ಸ್ಥಾನ ಗಿಟ್ಟಿಸಿಕೊಂಡಿವೆ.

25 ಸಾವಿರದ ಒಳಗಿರುವ ಪಟ್ಟಣಗಳಲ್ಲಿ ಜಾಲಿ ಪಟ್ಟಣ ಪಂಚಾಯ್ತಿಯು ಇಡೀ ದಕ್ಷಿಣ ಭಾರತದಲ್ಲೇ ಏಳನೇ ಸ್ಥಾನಕ್ಕೇರಿದೆ. ಯಲ್ಲಾಪುರ 69, ಸಿದ್ದಾಪುರ 91, ಮುಂಡಗೋಡ 127 ಹಾಗೂ ಹೊನ್ನಾವರ 271ನೇ ಸ್ಥಾನ ಪಡೆದುಕೊಂಡಿವೆ.

‘ದಾಖಲೆಗಳ ಪ್ರಸ್ತುತಿ ಸಹಕಾರಿ’

ಮೂರು ವರ್ಷಗಳ ಅವಧಿಯಲ್ಲಿ ಕಾರವಾರವೂ ಸೇರಿದಂತೆ ಜಿಲ್ಲೆಯ ನಗರ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಹಲವಾರು ಕೆಲಸಗಳಾಗಿವೆ. ಆದರೆ, ಅವುಗಳನ್ನು ದಾಖಲಿಸಿ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಗೆ ಬರುವವರಿಗೆ ತೋರಿಸುವಲ್ಲಿ ವೈಫಲ್ಯ ಕಾಡಿತ್ತು. ಇದೇ ಕಾರಣದಿಂದ ಈ ಹಿಂದಿನ ವರ್ಷಗಳಲ್ಲಿ ರ್ಯಾಂಕಿಂಗ್ ಪಟ್ಟಿಯಲ್ಲಿ ಜಿಲ್ಲೆಯ ನಗರಗಳು ಹಿಂದುಳಿದವು ಎಂದು ಅಧಿಕಾರಿಯೊಬ್ಬರು ವಿಶ್ಲೇಷಿಸುತ್ತಾರೆ.

ಜಾಲಿ ಪಟ್ಟಣ ಪಂಚಾಯ್ತಿಯು ಸಮೀಕ್ಷೆಗೆ ಬಂದವರಿಗೆ ಯಾವ ರೀತಿ ಮಾಹಿತಿ ನೀಡಿದ್ದಾರೆ ಎಂದು ಪರಿಶೀಲಿಸಬೇಕು. ಇತರ ಸ್ಥಳೀಯ ಸಂಸ್ಥೆಗಳಿಗೂ ಅದೇ ಮಾದರಿಯನ್ನು ಅಳವಡಿಸಿಕೊಂಡರೆ ಇತರ ಸ್ಥಳೀಯ ಸಂಸ್ಥೆಗಳೂ ಮುಂದಿನ ವರ್ಷ ರ್ಯಾಂಕಿಂಗ್ ಪಟ್ಟಿಯಲ್ಲಿ ಮತ್ತಷ್ಟು ಮೇಲೇರಬಹುದು ಎಂದು ಅವರು ಅಭಿಪ್ರಾಯಪಡುತ್ತಾರೆ.

ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ರ್ಯಾಂಕಿಂಗ್

ಜನಸಂಖ್ಯೆ: 50 ಸಾವಿರದಿಂದ 1 ಲಕ್ಷ

ಸ್ಥಳೀಯ ಸಂಸ್ಥೆ;2019ರ ರ್ಯಾಂಕಿಂಗ್;2020ರ ರ್ಯಾಂಕಿಂಗ್

ಶಿರಸಿ;1040;23

ಕಾರವಾರ;57;790

ದಾಂಡೇಲಿ;145;1,040

ಜನಸಂಖ್ಯೆ: 25 ಸಾವಿರದಿಂದ 50 ಸಾವಿರ

ಹಳಿಯಾಳ;23;233

ಕುಮಟಾ;50;170

ಭಟ್ಕಳ;52;258

ಅಂಕೋಲಾ;53;764

ಜನಸಂಖ್ಯೆ: 25 ಸಾವಿರದವರೆಗೆ

ಜಾಲಿ;7;840

ಯಲ್ಲಾಪುರ;69;591

ಸಿದ್ದಾಪುರ;91;175

ಹೊನ್ನಾವರ;271;670

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.