ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆನಾಶಕ ಸಿಂಪಡಣೆಯಿಂದ ಅಸ್ವಸ್ಥಗೊಂಡಿದ್ದ ಉಪವಲಯ ಅರಣ್ಯಾಧಿಕಾರಿ ಸಾವು

Published 7 ಜುಲೈ 2023, 15:54 IST
Last Updated 7 ಜುಲೈ 2023, 15:54 IST
ಅಕ್ಷರ ಗಾತ್ರ

ದಾಂಡೇಲಿ: ಅರಣ್ಯ ಸಾಗವಾನಿ ಸಸಿಗಳಿಗೆ ಕಳೆನಾಶಕ ಸಿಂಪಡಿಸಿದ ಬಳಿಕ ಅಸ್ವಸ್ಥಗೊಂಡಿದ್ದ ವಿರ್ನೋಲಿ ಅರಣ್ಯ ವಲಯದ ಕುಳಗಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಯೊಗೀಶ ನಾಯ್ಕ (33) ಶುಕ್ರವಾರ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

‘4 ದಿನಗಳ ಹಿಂದೆ ಹೊಟ್ಟೆನೋವು ಕಾರಣಕ್ಕೆ ಹುಬ್ಬಳ್ಳಿಯ ಆಸ್ಪತ್ರೆಗೆ ತೆರಳಿದ್ದರು. ವಾರದ ಹಿಂದೆ ಸಾಗವಾನಿ ಸಸಿಗಳಿಗೆ ಕೀಟನಾಶಕ ಸಿಂಪಡಿಸಿದ ಬಳಿಕ ಅವರ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಕೀಟನಾಶಕದ ಅಂಶ ದೇಹಕ್ಕೆ ಸೇರಿದ್ದರಿಂದ ಈ ರೀತಿ ಆಗಿರಬಹುದು’ ಎಂದು ಯೋಗೀಶ್ ಅವರ ಸಹೋದ್ಯೋಗಿಯೊಬ್ಬರು ತಿಳಿಸಿದ್ದಾರೆ.

‘ಯೊಗೀಶ್ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಮತ್ತು ಪೊಲೀಸ್ ವರದಿ ಬಂದ ಬಳಿಕ ನಿರ್ದಿಷ್ಟ ಕಾರಣ ತಿಳಿಯಲಿದೆ’ ಎಂದು ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT