ಪ್ರಜಾವಾಣಿ ವಾರ್ತೆ

ಶಿರಸಿ: ಇಲ್ಲಿನ ರೋಟರಿ ಆಶ್ರಯದಲ್ಲಿ ನಗರದ ವಿಕಾಸಾಶ್ರಮ ಬಯಲಿನಲ್ಲಿ ಏರ್ಪಡಿಸಲಾಗಿದ್ದ ಆಹಾರ ಮೇಳ ಮತ್ತು ಆಲೆಮನೆ ಉತ್ಸವದಲ್ಲಿ ಬುಧವಾರ ನಡೆಸಲಾದ ರೋಟರಿ ಮಿಸ್ ಉತ್ತರ ಕನ್ನಡ ಜಿಲ್ಲಾ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ದೃಷ್ಟಿ ಪಿ. ನಾಯ್ಕ ಪ್ರಥಮ ಸ್ಥಾನ ಪಡೆದರು.

ರಾಣಿ ರಾಜಾರಾಮ ಶೆಟ್ಟಿ ಪ್ರಥಮ ರನ್ನರ್ ಅಪ್ ಮತ್ತು ದಿವ್ಯಶ್ರೀ ಎಂ. ಶೇಟ್ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನು ಬಾಚಿಕೊಂಡರು. ವಿಶೇಷ ಬಹುಮಾನಗಳಾದ ಮಿಸ್ ಕಲ್ಙರ್ (ಸಂಸ್ಕೃತಿ) ಆಗಿ ದಿಶಾ ವಿ. ಶೆಟ್ಟಿ, ಮಿಸ್ ಕಾಂಜೆನಿಯಾಲಿಟಿ (ಸೌಹಾರ್ದತೆ) ಆಗಿ ಗಾನವರ್ಶಿನಿ ಆರ್.ಡಿ., ಮಿಸ್ ಬೆಸ್ಟ್ ಸ್ಮೈಲ್(ಅತ್ಯುತ್ತಮ ನಗು) ಆಗಿ ದಿಶಾ ಜೋಗಳೇಕರ ಮತ್ತು ಮಿಸ್ ಫ್ಯಾಶನ್ ಐಕಾನ್(ಪ್ರತಿಮೆ) ಆಗಿ ಖುಷಿ ಎನ್.ಕೆ. ಸಾಧನೆ ಮೆರೆದರು.

ಸ್ಪರ್ಧೆಯನ್ನು ಕ್ಯಾಟ್ ವಾಕ್ (ಬೆಕ್ಕಿನ ನಡಿಗೆ), ಸ್ವ ಪರಿಚಯ ಪ್ರಸ್ತುತಿ ಮತ್ತು ಪ್ರಶ್ನೋತ್ತರದ ಮೂಲಕ ಬುದ್ಧಿಮತ್ತೆ ಪರೀಕ್ಷೆ ಹೀಗೆ ಮೂರು ಹಂತಗಳಲ್ಲಿ ನಡೆಸಲಾಯಿತು. ಸಂಚಾಲಕಿ ರಂಜನಾ ರೋಷನ್ ಹುಲೇಕಲ್, ದೀಪ್ತಿ ಉದಾಸಿ ಮತ್ತು ಶೈಲಾ ಹೆಗಡೆ ಸಹಕರಿಸಿದರು. ಸಿಂಧು ಚಂದ್ರ ನಿರೂಪಿಸಿದರು.

ಬಹುಮಾನ ಪ್ರಾಯೋಜಿಸಿದ ಡಾ. ಪ್ರಿಯಾಂಕಾ ನಾಯ್ಕ ಮತ್ತು ಸಂಧ್ಯಾ ನಾಯ್ಕ ವಿಜೇತರನ್ನು ಪುರಸ್ಕರಿಸಿದರು. ಗೀತಾ ಭೀಮಣ್ಣ ನಾಯ್ಕ ಮತ್ತು ಇನ್ನರ್ ವ್ಹೀಲ್ ಅಧ್ಯಕ್ಷೆ ವಿದ್ಯಾ ನಾಯ್ಕ ವೇದಿಕೆಯಲ್ಲಿದ್ದರು. ಶಿರಸಿ ರೋಟರಿ ಪದಾಧಿಕಾರಿಗಳಾದ ಶ್ರೀನಿವಾಸ ನಾಯ್ಕ, ಹರೀಶ ಹೆಗಡೆ, ವಿನಾಯಕ ಶೇಟ್, ಸತೀಶ ಭಟ್ ನಾಡಗುಳಿ, ಗಣೇಶ ಭಟ್ ಕೂರ್ಸೆ ಮುಂತಾದವರು ಸಕ್ರಿಯ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.