ನದಿ ತಿರುವು ಯೋಜನೆಯಾದರೆ...!
‘ಗಂಗಾವಳಿ ನದಿ ಅದಕ್ಕೆ ಮುನ್ನ ಘಟ್ಟದ ಮೇಲ್ಭಾಗದಲ್ಲಿ ಹರಿಯುವ ಬೇಡ್ತಿ ನದಿಯಲ್ಲಿ ಬೇಸಿಗೆ ಆರಂಭದಲ್ಲೇ ನೀರಿನ ಹರಿವು ಕಡಿಮೆಯಾಗುತ್ತಿದೆ. ಕರಾವಳಿ ಭಾಗಕ್ಕೆ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗುವ ಆತಂಕ ಹಲವು ವರ್ಷದಿಂದ ಎದುರಾಗುತ್ತಿದೆ. ಒಂದು ವೇಳೆ ಬೇಡ್ತಿ ನದಿ ತಿರುವು ಯೋಜನೆ ಜಾರಿಯಾದರೆ ಪರಿಸ್ಥಿತಿ ಬಿಗಡಾಯಿಸುವುದು ನಿಶ್ಚಿತ. ಕರಾವಳಿ ಭಾಗಕ್ಕೆ ನೀರಿನ ಹರಿವು ಕಡಿಮೆಯಾಗುವ ಮೂಲಕ ಕುಡಿಯಲು ನೀರಿಗೆ ತತ್ವಾರ ಉಂಟಾದರೆ ಇನ್ನೊಂದೆಡೆ ಉಪ್ಪುನೀರು ಬಹುದೂರದವರೆಗೆ ನುಗ್ಗುತ್ತದೆ. ಇಲ್ಲಿನ ಕೃಷಿಭೂಮಿ ಪರಿಸರ ಜೀವವೈವಿಧ್ಯಕ್ಕೆ ಮಾರಕವಾಗಲಿದೆ’ ಎಂದು ಪರಿಸರ ಜೀವಶಾಸ್ತ್ರಜ್ಞ ವಿ.ಎನ್.ನಾಯಕ ಎಚ್ಚರಿಸುತ್ತಾರೆ.