ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಅಂಗವಿಕಲ ಮಕ್ಕಳ ಯೋಗಕ್ಷೇಮ ವಿಚಾರಿಸಿದ ರಾಜ್ಯಪಾಲ

Published 14 ಡಿಸೆಂಬರ್ 2023, 14:02 IST
Last Updated 14 ಡಿಸೆಂಬರ್ 2023, 14:02 IST
ಅಕ್ಷರ ಗಾತ್ರ

ಕಾರವಾರ: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ನಗರದ ಆಶಾನಿಕೇತನ ಮತ್ತು ನವ್ಯಜ್ಯೋತಿ ನಿಲಯಂ ಅಂಗವಿಕಲ ಮಕ್ಕಳ ಶಾಲೆಯ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿ ಆತ್ಮವಿಶ್ವಾಸ ತುಂಬಿದರು.

ಕದಂಬ ನೌಕಾನೆಲೆಗೆ ಬುಧವಾರ ಭೇಟಿ ನೀಡಿದ್ದ ವೇಳೆ ಅಲ್ಲಿಗೆ ಬಂದಿದ್ದ ಮಕ್ಕಳೊಂದಿಗೆ ಕೆಲ ಹೊತ್ತು ಕಳೆದ ಅವರು ವಿದ್ಯಾರ್ಥಿಗಳೊಂದಿಗೆ ಫೋಟೊ ತೆಗೆಸಿಕೊಂಡು ಖುಷಿಪಟ್ಟರು.

ಇದಕ್ಕೂ ಮೊದಲು ನೌಕಾಪಡೆಯ ಚೇತಕ್ ಹೆಲಿಕ್ಯಾಪ್ಟರ್ ಮತ್ತು ನೌಕಾದಳದ ಬ್ಯಾಂಡ್‍ನಿಂದ ಗೌರವ ವಂದನೆ ಸ್ವೀಕರಿಸಿದರು. ಅಂಜದೀವ್ ದ್ವೀಪದಲ್ಲಿ ವಿಜಯ ದಿನದ ಸಂಕೇತವಾಗಿ 100 ಅಡಿ ಎತ್ತರದ ಧ್ವಜಕಂಬದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದರು. ನೌಕಾಪಡೆಯ ಕುರಿತ ಕಿರು ಚಿತ್ರ ಮತ್ತು ನೌಕಾ ಪಡೆಯ ಶಾಲೆಯ ವಿದ್ಯಾರ್ಥಿಗಳಿಂದ ದೇಶ ಭಕ್ತಿಯ ಕುರಿತ ನೃತ್ಯ ಪ್ರದರ್ಶನ ವೀಕ್ಷಿಸಿದರು.

ರಿಯರ್ ಅಡ್ಮಿರಲ್ ಕೆ.ಎಂ.ರಾಮಕೃಷ್ಣನ್, ಕಮೋಡೋರ್ ಆಶೀಸ್ ಗೋಯಲ್, ನಿತೀನ್ ನಗೈ, ಕದಂಬ ನೌಕಾನೆಲೆಯ ಕ್ಯಾಪ್ಟನ್ ವಿವೇಕ್ ಸಿಂಗ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT