ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಯಿಡಾ: ಗ್ರಾ.ಪಂ.ಗಳಿಗೆ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ

Published 21 ಜೂನ್ 2023, 15:44 IST
Last Updated 21 ಜೂನ್ 2023, 15:44 IST
ಅಕ್ಷರ ಗಾತ್ರ

ಜೊಯಿಡಾ: ತಾಲ್ಲೂಕಿನ 16 ಗ್ರಾಮ ಪಂಚಾಯಿತಿಗಳಿಗೆ ಎರಡನೆಯ ಅವಧಿಗೆ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸುವ ಸಭೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಉಪ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ, ತಹಶೀಲ್ದಾರ ಬಸವರಾಜ ಟಿ., ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ ಇದ್ದರು.

ಮೀಸಲಾತಿ ವಿವರ: ಆಖೇತಿ ಗ್ರಾಮ ಪಂಚಾಯಿತಿ ಅಧ್ಯಕ್ಷ (ಹಿಂದುಳಿದ ವರ್ಗ ಬ ಮಹಿಳೆ), ಉಪಾಧ್ಯಕ್ಷ (ಹಿಂದುಳಿದ ವರ್ಗ ಅ); ಕ್ಯಾಸಲ್ ರಾಕ್ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ); ಬಜಾರಕುಣಂಗ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ); ಅಸು ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ); ರಾಮನಗರ ಅಧ್ಯಕ್ಷ (ಹಿಂದುಳಿದ ವರ್ಗ ಅ), ಉಪಾಧ್ಯಕ್ಷ (ಹಿಂದುಳಿದ ವರ್ಗ ಬ ಮಹಿಳೆ); ಸಿಂಗರಗಾಂವ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಹಿಂದುಳಿದ ವರ್ಗ ಎ ಮಹಿಳೆ); ಜಗಲಪೇಟ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ); ಆವೇಡಾ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ); ಪ್ರಧಾನಿ ಅಧ್ಯಕ್ಷ (ಹಿಂದುಳಿದ ವರ್ಗ ಅ), ಉಪಾಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ); ನಾಗೋಡಾ ಅಧ್ಯಕ್ಷ (ಹಿಂದುಳಿದ ವರ್ಗ ಅ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ); ಜೊಯಿಡಾ ಅಧ್ಯಕ್ಷ (ಹಿಂದುಳಿದ ವರ್ಗ ಅ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ); ಕಾತೇಲಿ (ಕುಂಬಾರವಾಡ) ಅಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ), ಉಪಾಧ್ಯಕ್ಷ (ಹಿಂದುಳಿದ ವರ್ಗ ಅ); ಉಳವಿ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಹಿಂದುಳಿದ ವರ್ಗ ಅ ಮಹಿಳೆ); ನಂದಿಗದ್ದಾ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ); ಅಣಶಿ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ); ಗಾಂಗೋಡಾ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT