ಕಾರವಾರ: ಇಲ್ಲಿನ ಕಾಳಿ ನದಿ ಅಳಿವೆಯಲ್ಲಿ ಸಿಲುಕಿಕೊಂಡು, ರಕ್ಷಿಸಲ್ಪಟ್ಟಿದ್ದ ಹಸಿರು ಕಡಲಾಮೆಯನ್ನು ಶನಿವಾರ ಬೆಳಿಗ್ಗೆ ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಸಮುದ್ರಕ್ಕೆ ಬಿಡಲಾಯಿತು.

ಎರಡು ದಿನಗಳಿಂದ ಅರಣ್ಯ ಇಲಾಖೆಯ ಕೋಸ್ಟಲ್ ಮೆರೈನ್ ವಿಭಾಗದಿಂದ ಆರೈಕೆ ಮಾಡಲಾಗುತ್ತಿದ್ದ ಕಡಲಾಮೆ ಚೇತರಿಸಿಕೊಂಡಿತು. ನಿತ್ರಾಣ ಸ್ಥಿತಿಯಲ್ಲಿದ್ದ ಆಮೆ ಲವಲವಿಕೆ ಪಡೆದುಕೊಳ್ಳುತ್ತಿದ್ದಂತೆ ಸಮುದ್ರಕ್ಕೆ ಬಿಡಲಾಯಿತು.

'ಹಸಿರು ಕಡಲಾಮೆ ನಿತ್ರಾಣಗೊಂಡಿದ್ದರಿಂದ ಎರಡು ದಿನಗಳ ಕಾಲ ಆರೈಕೆ ಮಾಡಲಾಯಿತು. ಸಲೈನ್ ನೀಡಲಾಗಿತ್ತು. ತಜ್ಞರ ಸಲಹೆ ಪಡೆದು ಕಡಲತೀರದಲ್ಲಿ ಬಿಡಲಾಗಿದೆ. ಕಡಲಾಮೆ ಲವಲವಿಕೆಯಿಂದ ಸಮುದ್ರ ಸೇರಿಕೊಂಡಿದೆ' ಎಂದು ಕೋಸ್ಟಲ್ ಮೆರೈನ್ ವಿಭಾಗದ ಆರ್ಎಫ್ಒ ಕಿರಣ್ ಮನವಾಚಾರಿ ತಿಳಿಸಿದ್ದಾರೆ.

ಕಡಲಾಮೆ ಬಿಡುವ ವೇಳೆ ಡಿಆರ್ಎಫ್ಒ ಪ್ರಕಾಶ ಯರಗಟ್ಟಿ, ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.