ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದಾವರ: ಹ್ಯಾಕರ್ ಬಂಧನ

Last Updated 27 ಡಿಸೆಂಬರ್ 2022, 16:32 IST
ಅಕ್ಷರ ಗಾತ್ರ

ಹೊನ್ನಾವರ: ಮಹಿಳೆಯೊಬ್ಬರ ಮೊಬೈಲ್ ಫೋನ್ ಹ್ಯಾಕ್ ಮಾಡಿದ್ದ ಆರೋಪದ ಮೇಲೆ ಚಂದಾವರದ ಇಮಾಮ್ ಸಾಬ್ ಮುಲ್ಲಾ (27) ಎಂಬಾತನನ್ನು ಹರಿಯಾಣದ ಪೊಲೀಸರು ಬಂಧಿಸಿದ್ದಾರೆ.

ಹರಿಯಾಣದ ಪೊಲೀಸ್ ತಂಡ ಸ್ಥಳೀಯ ಪೊಲೀಸರ ನೆರವು ಪಡೆದು ಆರೋಪಿಯನ್ನು ಬಂಧಿಸಿದೆ. ಆರೋಪಿ ಇಮಾಮ್ ಸಾಬ್ ಅಮೆರಿಕಾದ ಮಹಿಳೆಯೊಬ್ಬರಿಂದ ಹಣ ಪಡೆದು ಆಕೆಯ ಅಣತಿಯಂತೆ ಹರಿಯಾಣ ರಾಜ್ಯದ ಗುರುಗ್ರಾಮದ ವಿವಾಹಿತ ಮಹಿಳೆಯ ಮೊಬೈಲ್ ಹ್ಯಾಕ್ ಮಾಡಿ ಅದರಲ್ಲಿದ್ದ ಫೋಟೊಗಳನ್ನು ಅಮೆರಿಕದ ಮಹಿಳೆಗೆಕಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಇ ಕಂಪ್ಯೂಟರ್ ಸೈನ್ಸ್ ಪದವೀಧರನಾಗಿದ್ದ ಆರೋಪಿ ಇಮಾಮ್ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾನೆ. ಊರಿಗೆ ವಾಪಸ್ ಬಂದಿದ್ದ ಈತ ಕಂಪನಿಯೊಂದಕ್ಕೆ ‘ಎಥಿಕಲ್ ಹ್ಯಾಕರ್’ ಎಂದು ಸೇವೆ ಸಲ್ಲಿಸುತ್ತಿದ್ದ. ಬಿ.ಎಂ.ಡಬ್ಲ್ಯೂ ಕಾರ್ ಖರೀದಿಸಿದ್ದ ಆರೋಪಿ ಐಷಾರಾಮಿ ಜೀವನ ಸಾಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT