ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಬಿರುಸಿನ ಮಳೆಯಾಗಿದೆ. ಮಳಗಿ ಗ್ರಾಮದ ಸನಿಹ ಮರವೊಂದು ರಸ್ತೆ ಮೇಲೆ ಬಿದ್ದು ವಾಹನ ಸಂಚಾರಕ್ಕೆ ಅಡೆತಡೆಯಾಗಿದೆ. ಇದೇ ಸ್ಥಳದಲ್ಲಿ ದಾರಿಮಾಡಿಕೊಂಡು ಹೋಗಲು ಯತ್ನಿಸಿದ್ದ ಅಂಬುಲೆನ್ಸ್ ಸಹ ರಸ್ತೆ ಬದಿ ಸಿಲುಕಿದೆ. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿದೆ.