ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರು ತೋರಿದ ಮಾರ್ಗದಲ್ಲಿ ನಡೆದರೆ ಸತ್ಪ್ರಜೆಗಳಾಗಲು ಸಾಧ್ಯ: ಶಾಸಕ ಭೀಮಣ್ಣ

Published 3 ಅಕ್ಟೋಬರ್ 2023, 13:26 IST
Last Updated 3 ಅಕ್ಟೋಬರ್ 2023, 13:26 IST
ಅಕ್ಷರ ಗಾತ್ರ

ಸಿದ್ದಾಪುರ: ‘ಹಿರಿಯರನ್ನು ಗೌರವಿಸಿ ಅವರ ಅನುಭದ ಮಾತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯುವ ಜನತೆ ಸತ್ಪ್ರಜೆಗಳಾಗಲು ಸಾಧ್ಯ’ ಎಂದು ಕ್ಷೇತ್ರದ ಶಾಸಕ ಭೀಮಣ್ಣ ಟಿ. ನಾಯ್ಕ ಹೇಳಿದರು.

ಮಂಗಳವಾರ ಪಟ್ಟಣದ ಬಾಲಭವನದಲ್ಲಿ ತಾಲ್ಲೂಕು ನಿವೃತ್ತ ನೌಕರರ ಸಂಘದಿಂದ ಹಮ್ಮಿಕೊಂಡ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿವೃತ್ತ ಹಿರಿಯ ನೌಕರರಾದ ಅಪ್ಪಣ್ಣ ಚನ್ನ ಗಾಳಿ ಅವರಗುಪ್ಪ, ಗಣಪತಿ ಮೈಲಾ ನಾಯ್ಕ ಬೇಡ್ಕಣಿ, ಗಣಪತಿ ಈಶ್ವರ ನಾಯ್ಕ ಹೊಸೂರು ಹಾಗೂ ಹಿರಿಯ ನಾಗರಿಕರಾದ ಮುರುಗಯ್ಯ ಗೌಡರ್ ಕೋಲಸಿರ್ಸಿ, ರಾಮ ಕನ್ನ ಗಣಪನ್ ಕಾನಗೋಡ, ಶ್ರೀಧರ ಹೆಗಡೆ ಹುಲಿಮನೆ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ತಹಶೀಲ್ದಾರ ಎಂ.ಆರ್. ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ. ನಾಯ್ಕ, ಸಿಡಿಪಿಒ ಪೂರ್ಣಿಮಾ ಆರ್. ಇದ್ದರು.

ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್, ಗಣಪತಿ ಹೆಗಡೆ ಹುಲಿಮನೆ, ಭೂ ಮಾಪನ ಇಲಾಖೆಯ ಉಷಾ ನಾಯ್ಕ, ಜಿ.ಎಂ. ಕುಮಟಾಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT