ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕರ್ಣದಲ್ಲಿ ಅತಿಥಿ ಗೃಹ: 200ರಲ್ಲಿ 180 ಅನಧಿಕೃತ!

Published 12 ಅಕ್ಟೋಬರ್ 2023, 21:05 IST
Last Updated 12 ಅಕ್ಟೋಬರ್ 2023, 21:05 IST
ಅಕ್ಷರ ಗಾತ್ರ

ಕುಮಟಾ (ಉತ್ತರ ಕನ್ನಡ ಜಿಲ್ಲೆ): ‘ಗೋಕರ್ಣದಲ್ಲಿರುವ 200 ರೆಸಾರ್ಟ್, ಹೋಮ್ ಸ್ಟೇಗಳಲ್ಲಿ 20 ಮಾತ್ರ ಅಧಿಕೃತ. 180 ಅನಧಿಕೃತ’ ಎಂಬ ಮಾಹಿತಿಯನ್ನು ತಾಲ್ಲೂಕು ಆಡಳಿತ ಬಹಿರಂಗಪಡಿಸಿದೆ.

‘ವಿದೇಶಿ ಪ್ರವಾಸಿಗರನ್ನು ಸೆಳೆಯುವ ಗೋಕರ್ಣದಲ್ಲಿ ಪ್ರತಿ ವರ್ಷ ರೆಸಾರ್ಟ್, ಹೋಮ್ ಸ್ಟೇಗಳ ಸಂಖ್ಯೆ ಹೆಚ್ಚುತ್ತಿದೆ. ಕುಮಟಾ ಭಾಗದಲ್ಲಿ 45, ಗೋಕರ್ಣದಲ್ಲಿ 155 ರೆಸಾರ್ಟ್, ಹೋಂ ಸ್ಟೇಗಳಿವೆ. ಆತಿಥ್ಯಕ್ಕೆ ಹೆಸರುವಾಸಿಯಾದ ಇಲ್ಲಿನ ಅತಿಥಿಗೃಹಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಆದರೆ, ನಿಯಮಾನುಸಾರ ಪರವಾನಗಿ ಪಡೆದ ಅತಿಥಿಗೃಹಗಳ ಸಂಖ್ಯೆ ಕಡಿಮೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

ಈಚೆಗೆ ತಾಲ್ಲೂಕಿನ ಬಾಡದಲ್ಲಿರುವ ರೆಸಾರ್ಟ್‌ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಆರೋಪದ ಮೇಲೆ ಪೊಲೀಸರು ದಾಳಿ ನಡೆಸಿ, ಇಬ್ಬರು ಅರೋಪಿಗಳನ್ನು ಬಂಧಿಸಿದ್ದರು. ಇದರ ಬೆನ್ನಲ್ಲೆ ತಾಲ್ಲೂಕು ಆಡಳಿತ ಎಚ್ಚೆತ್ತು  ರೆಸಾರ್ಟ್, ಹೋಂ ಸ್ಟೇಗಳ ಮಾಹಿತಿ ಕಲೆ ಹಾಕಲು ಆರಂಭಿಸಿತ್ತು.

‘ಸಮುದ್ರ ತೀರದಲ್ಲಿ ರೆಸಾರ್ಟ್ ಅಥವಾ ಹೋಂ ಸ್ಟೇ ಆರಂಭಿಸುವ ಉದ್ದೇಶವಿದ್ದರೆ, ಸಮುದ್ರ ನೀರಿನ ಮಟ್ಟದಿಂದ 500 ಮೀಟರ್ ಅಂತರದಲ್ಲಿ ಕಟ್ಟಡ ನಿರ್ಮಿಸಬಾರದು ಎಂಬುದು ಕರಾವಳಿ ನಿಯಂತ್ರಣ ವಲಯದ (ಸಿ.ಆರ್.ಝಡ್) ನಿಯಮ.  ಪ್ರವಾಸೋದ್ಯಮ ಸಮಿತಿಯ ಅನುಮೋದನೆ ಪಡೆಯಬೇಕು ಎಂಬ ನಿಯಮವೂ ಇದೆ. ಆದರೆ ಬಹುತೇಕ ರೆಸಾರ್ಟ್ ಮತ್ತು ಹೋಂ ಸ್ಟೇ ಅನುಮತಿಯನ್ನೇ ಪಡೆದಿಲ್ಲ’ ಎಂದು ತಹಶೀಲ್ದಾರ್ ಸತೀಶ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮ ಪಂಚಾಯ್ತಿಯಿಂದ ನಿರಾಕ್ಷೇಪಣಾ ಪತ್ರ ಪಡೆದು ರೆಸಾರ್ಟ್, ಹೋಂ ಸ್ಟೇ ನಡೆಸಲಾಗುತ್ತಿದೆ. ಈಚೆಗೆ ಬಾಡದ ಘಟನೆ ನಡೆದ ಬಳಿಕ ಪರಿಶೀಲನೆ ನಡೆಸಿದ ಬಳಿಕ ಈ ಮಾಹಿತಿ ಅರಿವಿಗೆ ಬಂದಿದ್ದು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು’ ಎಂದರು.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ರೆಸಾರ್ಟ್ ಹೋಂ ಸ್ಟೇಗಳ ಪರಿಶೀಲನೆ ಕಾರ್ಯ ಸದ್ಯದಲ್ಲೇ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು
–ಬೇಬಿ ಮೊಘೇರಾ ಉಪನಿರ್ದೇಶಕಿಪ್ರವಾಸೋದ್ಯಮ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT