ಪ್ರಜಾಸೌಧ ಆವರಣದಲ್ಲಿ ಕರಾವಳಿ ಉತ್ಸವ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು ಹೂವಿನಿಂದ ರಚಿಸಿದ್ದ ರಂಗೋಲಿಗಳು ಗಮನಸೆಳೆದವು.
ಕರಾವಳಿ ಉತ್ಸವದ ಸಪ್ತಾಹದ ಅಂಗವಾಗಿ ಮಾಲಾದೇವಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಖಾದ್ಯಮೇಳದಲ್ಲಿ ಮಹಿಳಾ ಬಾಣಸಿಗರೊಬ್ಬರು ಸಿದ್ಧಪಡಿಸಿದ ಖಾದ್ಯದ ಬಗ್ಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಮಾಹಿತಿ ಪಡೆದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಪಾಲ್ಗೊಂಡಿದ್ದರು.