ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ ರೋಟರಿ ಕ್ಲಬ್‌ಗೆ 11 ಪ್ರಶಸ್ತಿ

ಫಾಲೋ ಮಾಡಿ
Comments

ಕಾರವಾರ: ಕಾರವಾರ ರೋಟರಿ ಕ್ಲಬ್ 2020– 21ನೇ ಸಾಲಿನ ಉತ್ತಮ ನಿರ್ವಹಣೆಗಾಗಿ 11 ‍ಪ‍್ರಶಸ್ತಿಗಳನ್ನು ಪಡೆದುಕೊಂಡಿದೆ. ಸಂಘಟನೆಯು ಕೊಲ್ಲಾಪುರದಲ್ಲಿ ಈಚೆಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸುನಿಲ್ ಸೋನಿ ಮತ್ತು ತಂಡದವರು ಪ್ರಶಸ್ತಿ ಸ್ವೀಕರಿಸಿದರು.

ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3170ರ ಜಿಲ್ಲಾ ಪ್ರಾಂತಪಾಲರ ಪ್ರಶಂಸನಾ ಪ್ರಶಸ್ತಿ ವಿಭಾಗದಲ್ಲಿ ಗೌರವಕ್ಕೆ ಪಾತ್ರವಾಗಿದೆ. ಉತ್ತಮ ಕ್ಲಬ್, ಉತ್ತಮ ಅಧ್ಯಕ್ಷ, ಉತ್ತಮ ಕಾರ್ಯದರ್ಶಿ ಸೇರಿದಂತೆ ಸಾಕ್ಷರತೆ, ಯುವಜನ ಸೇವಾ ಯೋಜನೆ, ಸೇವೆ, ಸಮುದಾಯ ಸೇವೆ, ಟಿ.ಆರ್.ಎಫ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆ, ಸಾಂದರ್ಭಿಕ ಸೇವೆಗಳು, ಸಣ್ಣ ಕ್ಲಬ್‌ಗಳಲ್ಲಿ ಅತ್ಯುತ್ತಮ ಆಡಳಿತ ಮತ್ತು ಸಮುದಾಯ ಸೇವೆಗಾಗಿ ಪ್ರಶಂಸನಾ ಪತ್ರಗಳನ್ನು ನೀಡಲಾಗಿದೆ.

ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ಸಂಗ್ರಾಮ್ ಪಾಟೀಲ್ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕಾರವಾರ ರೋಟರಿ ಕ್ಲಬ್‌ನ ಕಾರ್ಯದರ್ಶಿ ಗಣಪತಿ ಬಾಡ್ಕರ್, ಸಹಾಯಕ ಗವರ್ನರ್ ನಾಗರಾಜ ಜೋಶಿ, ಅಮರನಾಥ ಶೆಟ್ಟಿ, ಶೈಲೇಶ ಹಳದೀಪುರಕರ್, ಗುರುದತ್ತ ಬಂಟ್, ರಾಮಚಂದ್ರ ಪಡುವಳಕರ್, ಗುರು ಹೆಗಡೆ ಅವರೂ ಜೊತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT