ಕಾರವಾರ: ರಾಜ್ಯದಲ್ಲಿ ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ಜಿಲ್ಲೆಗಳ ಪೈಕಿ 4ನೇ ಸ್ಥಾನದಲ್ಲಿರುವ ಉತ್ತರ ಕನ್ನಡದಲ್ಲಿ ಪ್ರವಾಸೋದ್ಯಮ ಕ್ಷೇತ್ರ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ರಾಜ್ಯ ಸರ್ಕಾರ ಈ ಬಾರಿಯಾದರೂ ಇಲ್ಲಿನ ತಾಣಗಳ ಅಭಿವೃದ್ಧಿಗೆ ಮುಂದಾಗಬಹುದು ಎಂಬ ನಿರೀಕ್ಷೆ ಜನರಲ್ಲಿದೆ.

2024–29ರ ಅವಧಿಗೆ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಪ್ರವಾಸಿ ತಾಣಗಳ ಪಟ್ಟಿ ಪರಿಷ್ಕರಿಸಲಾಗಿದೆ. ಹೊಸ ಪಟ್ಟಿ ಪ್ರಕಾರ ಅಧಿಕೃತ ಪ್ರವಾಸಿ ತಾಣಗಳ ಸಂಖ್ಯೆ 86. ಆದರೆ, ಅವುಗಳ ಪೈಕಿ ಬಹುತೇಕ ತಾಣಗಳು ರಸ್ತೆ, ಸಂಪರ್ಕ ಸೌಲಭ್ಯಗಳಿಂದ ವಂಚಿತವಾಗಿವೆ.

ರಾಜ್ಯದಲ್ಲೇ ಅತಿ ಉದ್ದದ ಕಡಲತೀರ ಪ್ರದೇಶ ಹೊಂದಿರುವ ಇಲ್ಲಿ ಕರಾವಳಿ ಪ್ರವಾಸೋದ್ಯಮವೂ ಈವರೆಗೆ ನಿರೀಕ್ಷಿತ ಪ್ರಗತಿ ಕಂಡಿಲ್ಲ. ವರ್ಷದಿಂದ ವರ್ಷಕ್ಕೆ ರೆಸಾರ್ಟ್, ಹೋಮ್ ಸ್ಟೇಗಳ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ, ಪರವಾನಗಿ ನೀಡಲು ವ್ಯವಸ್ಥೆ ಸರಿಯಾಗಿಲ್ಲ. ಕಠಿಣ ನಿಯಮಾವಳಿಗಳ ಕಾರಣದಿಂದ ಆತಿಥ್ಯ ವಲಯದ ಪ್ರಗತಿ ಕುಂಠಿತಗೊಳ್ಳುತ್ತಿದೆ ಎಂಬುದು ಪ್ರವಾಸೋದ್ಯಮಿಗಳ ದೂರು.

‘ಗೋಕರ್ಣ, ಮುರುಡೇಶ್ವರ, ಹೊನ್ನಾವರ, ಬಾಡ, ಕಾರವಾರ ಸೇರಿದಂತೆ ಹಲವೆಡೆ ಕಡಲತೀರಗಳಲ್ಲಿ ರೆಸಾರ್ಟ್, ಹೋಮ್ ಸ್ಟೇಗಳ ನಿರ್ಮಾಣಕ್ಕೆ ಇನ್ನೂ ಹೆಚ್ಚು ಅವಕಾಶಗಳಿವೆ. ನಿರ್ಮಾಣಕ್ಕೆ ಅನುಮತಿ ನೀಡುವ ವ್ಯವಸ್ಥೆ ಸರಿಯಾಗಿಲ್ಲ. ನಿಯಮ ಸರಳೀಕರಿಸಿ, ಏಕಗವಾಕ್ಷಿ ಮೂಲಕ ಪರವಾನಗಿ ನೀಡುವ ಸೌಲಭ್ಯವಾದರೆ ಅನುಕೂಲ. ಅಲ್ಲದೇ, ರೆಸಾರ್ಟ್ಗಳಿಗೆ ನೀಡುತ್ತಿರುವ ಸಹಾಯಧನ ಮೊತ್ತ ಹೆಚ್ಚಳಕ್ಕೆ ಬಜೆಟ್ನಲ್ಲಿ ಯೋಜನೆ ಘೋಷಿಸಿದರೆ ಅನುಕೂಲ’ ಎನ್ನುತ್ತಾರೆ ಉದ್ಯಮಿ ನಾಗಕುಮಾರ.

‘ಕಡಲತೀರಗಳು ಪ್ರವಾಸಿಗರನ್ನು ಹೆಚ್ಚು ಸೆಳೆಯುತ್ತಿವೆ. ಆದರೆ, ಅಲ್ಲಿ ಸ್ವಚ್ಛತೆ, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಇದೆ. ಅಳಿವೆ ಪ್ರದೇಶದಲ್ಲಿನ ಕಾಂಡ್ಲಾವನ, ನಡುಗಡ್ಡೆಗಳನ್ನು ಪ್ರವಾಸಿಗರಿಗೆ ಪ್ರದರ್ಶಿಸುವ ಅಗತ್ಯವಿದೆ. ಇವೆಲ್ಲವುಗಳಿಗೆ ರಾಜ್ಯ ಸರ್ಕಾರವೇ ವಿಶೇಷ ಯೋಜನೆ ಘೋಷಿಸಿದರೆ ಅನುಕೂಲ’ ಎಂದು ಪ್ರವಾಸೋದ್ಯಮಿ ವಿನಯ ನಾಯ್ಕ ಹೇಳಿದರು.

‘ಪ್ರವಾಸಿಗರನ್ನು ಸೆಳೆಯಲು ಜಲಸಾಹಸ ಚಟುವಟಿಕೆಗಳು ಹೆಚ್ಚು ಅನುಕೂಲವಾಗಿವೆ. ಸ್ಪಷ್ಟ ನೀತಿ, ಯೋಜನೆಗಳಿಲ್ಲದೆ ನಿರೀಕ್ಷಿತ ಮಟ್ಟದ ಪ್ರಗತಿ ಸಾಧಿಸಲಾಗುತ್ತಿಲ್ಲ. ಜಲಸಾಹಸ ಚಟುವಟಿಕೆಗಳನ್ನು ಹೆಚ್ಚಿಸುವ ಜೊತೆಗೆ ಚಟುವಟಿಕೆ ನಡೆಸುವವರಿಗೆ ಸೂಕ್ತ ಸೌಲಭ್ಯ, ಜೀವರಕ್ಷಕರ ನಿಯೋಜನೆಗೆ ಸರ್ಕಾರವೇ ಯೋಜನೆ ರೂಪಿಸಿದರೆ ಅನುಕೂಲ’ ಎಂದು ಗಣೇಶ ಹರಿಕಾಂತ ನೇತ್ರಾಣಿ ಹೇಳಿದರು.

ದೊಡ್ಡಮಟ್ಟದ ಉದ್ಯಮಗಳಿಲ್ಲದ ಜಿಲ್ಲೆಗೆ ಪ್ರವಾಸೋದ್ಯಮ ಕ್ಷೇತ್ರ ಜೀವಾಳ. ಈ ಕ್ಷೇತ್ರದಲ್ಲಿನ ಸೌಲಭ್ಯ ಹೆಚ್ಚಿಸಲು ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿದರೆ ಅನುಕೂಲ
ಜಿ.ಎಂ.ಶೆಟ್ಟಿ ಸಾಮಾಜಿಕ ಕಾರ್ಯಕರ್ತ

ಇಡೀ ಜಿಲ್ಲೆ ಪರಿಗಣಿಸಲಿ

‘ಪ್ರವಾಸೋದ್ಯಮ ಕ್ಷೇತ್ರ ಎಂದರೆ ಕೇವಲ ಕರಾವಳಿ ಭಾಗದ ಕಡಲತೀರ ಕೇಂದ್ರೀಕರಿಸುವ ಕೆಲಸ ಆಗಬಾರದು. ಜಿಲ್ಲೆಯು ಜಲಪಾತಗಳಿಗೆ ಹೆಸರುವಾಸಿಯಾಗಿದೆ. ಆದರೆ ಮಳೆಗಾಲದಲ್ಲಿ ಧುಮ್ಮಿಕ್ಕುವ ಜಲಪಾತಗಳನ್ನು ವೀಕ್ಷಿಸಲು ಅವಕಾಶ ನೀಡದೆ ನಿರ್ಬಂಧ ವಿಧಿಸುವ ಕೆಲಸ ನಡೆಯುತ್ತಿದೆ. ಅದರ ಬದಲು ಸರ್ಕಾರವೇ ಜಲಪಾತಗಳ ಬಳಿ ಸುರಕ್ಷತಾ ಕ್ರಮಕ್ಕೆ ಯೋಜನೆ ರೂಪಿಸಬೇಕು. ಜಿಲ್ಲೆಯಲ್ಲಿ ಪ್ರಸಿದ್ಧ ದೇವಾಲಯಗಳು ಐತಿಹಾಸಿಕ ಸ್ಮಾರಕಗಳಿವೆ. ನಿಸರ್ಗ ಪ್ರವಾಸೋದ್ಯಮ ಬೆಳೆಯಲು ಅವಕಾಶವಿದೆ. ಅಂತಹ ತಾಣಗಳಿಗೆ ಸುಸಜ್ಜಿತ ರಸ್ತೆಗಳಿಲ್ಲ. ಇಡೀ ಜಿಲ್ಲೆಯ ಪ್ರವಾಸಿ ತಾಣಗಳನ್ನು ಸಂಪರ್ಕಿಸಲು ಸುಸಜ್ಜಿತ ರಸ್ತೆ ನಿರ್ಮಿಸುವ ಜೊತೆಗೆ ಸೌಕರ್ಯಗಳಿಗೆ ಪ್ರತ್ಯೇಕ ಪ್ಯಾಕೇಜ್ ಘೋಷಿಸಲಿ’ ಎನ್ನುತ್ತಾರೆ ಪ್ರವಾಸೋದ್ಯಮಿ ಸುಹಾಸ್ ಹೆಗಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.