ಅವಧಿಪೂರ್ಣವಾದ ಬಳಿಕ₹1 ಲಕ್ಷ ದೊರೆಯುತ್ತದೆ ಎಂದು ವಿಮೆ ಏಜೆಂಟ್ ತಿಳಿಸಿದ್ದರು. ಅದನ್ನು ನಂಬಿದಲಂಬೋದರ ಹೆಬ್ಬಾರ ಎಲ್ಲ ಕಂತುಗಳನ್ನೂ ಪಾವತಿಸಿದ್ದರು. ಅವಧಿ ಪೂರ್ಣವಾದಬಳಿಕತಮ್ಮ ಹಣ ಪಡೆಯಲು ಹೋದಾಗ ಸಂಸ್ಥೆಯು ಕೇವಲ ₹ 50,544ನೀಡಿತ್ತು. ಪುನಃ ವಿಚಾರಿಸಿದಾಗ ₹ 12,636ಗಳನ್ನು ಮಾತ್ರ ನೀಡಲಾಯಿತು. ಪಾಲಿಸಿ ಖರೀದಿಸುವಾಗ ಏಜೆಂಟ್ ತಿಳಿಸಿದಂತೆ ₹1 ಲಕ್ಷ ಬರಲು ಇನ್ನೂ ₹ 36,820 ಸಿಗಬೇಕು. ಈ ಬಗ್ಗೆ ನಿರ್ದೇಶನ ನೀಡುವಂತೆಅವರು ಗ್ರಾಹಕರ ನ್ಯಾಯ ಮಂಡಳಿಯ ಮೊರೆ ಹೋದರು.