ಹೊನ್ನಾವರ: ಪಟ್ಟಣದ ಚರ್ಚ್ ರಸ್ತೆಯ ಮನೆಯೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ತಮ್ಮನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಅರ್ಜುನ್ ಶಂಕರ ಮೇಸ್ತ (23) ಕೊಲೆಯಾದ ವ್ಯಕ್ತಿ. ಘಟನೆಗೆ ಸಂಬಂಧಿಸಿದಂತೆ ಕೊಲೆಯಾದ ಅರ್ಜುನ್ ತಾಯಿ, ತಾರಾ ಶಂಕರ ಮೇಸ್ತ ಅವರು ನೀಡಿದ ದೂರು ಆಧರಿಸಿ ಪೊಲೀಸರು ಮೃತನ ಅಣ್ಣ ಕೃಷ್ಣ ಶಂಕರ ಮೇಸ್ತ (25) ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

‘ದುಡಿಯಲು ಹೋಗದೆ ಮನೆಯಲ್ಲೇ ಕಾಲ ಕಳೆಯಬೇಡ ಎಂದು ತಮ್ಮ ಅರ್ಜುನ್ ಬುದ್ಧಿವಾದ ಹೇಳಿದಾಗ ಅಣ್ಣ ಕೃಷ್ಣ ಸಿಟ್ಟಿನಿಂದ, ಕೊಲೆ ಮಾಡುವುದಾಗಿ ತಮ್ಮನಿಗೆ ಹೆದರಿಸುತ್ತಿದ್ದ. ಭಾನುವಾರ ರಾತ್ರಿ ನಾನು ಹೋಟೆಲ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಬಂದಾಗ ಕೃಷ್ಣ ಮನೆಗೆ ಬೀಗ ಹಾಕಿ ಎಲ್ಲಿಯೋ ಹೋಗಿದ್ದ. ಫೋನ್ ಮಾಡಿದರೂ ಬರಲಿಲ್ಲ. ಪಕ್ಕದ ಮನೆಯವರೊಬ್ಬರ ಸಹಾಯ ಪಡೆದು ಬೀಗ ಮುರಿದು ಒಳಗೆ ಹೋದಾಗ ಅರ್ಜುನ್ ಕೊಲೆಯಾಗಿರುವುದು ಕಂಡುಬಂತು’ ಎಂದು ಅರ್ಜುನ್ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಪಿ.ಎಸ್.ಐ.ಶಶಿಕುಮಾರ ಸಿ.ಆರ್. ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.