ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆಪೀಡಿತ ಪ್ರದೇಶದಲ್ಲಿ ಸಂಚಾರಿ ವೈದ್ಯಕೀಯ ಶಿಬಿರ

28 ರೈತರ ಮನೆಗೆ ಭೇಟಿ
Last Updated 12 ಆಗಸ್ಟ್ 2019, 12:25 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಸ್ವರ್ಣವಲ್ಲಿ ಮಠವು ರೋಟರಿ ಕ್ಲಬ್ ಹಾಗೂ ಐಎಂಎ ಘಟಕಗಳ ಸಹಯೋಗದಲ್ಲಿ ಗಂಗಾವಳಿ ನೆರೆಪೀಡಿತ ಪ್ರದೇಶದಲ್ಲಿ ಸಂಚಾರಿ ವೈದ್ಯಕೀಯ ಶಿಬಿರ ನಡೆಸಿತು. ನೆರೆಪೀಡಿತರಿಗೆ ಅಕ್ಕಿ, ಧವಸ–ಧಾನ್ಯ ವಿತರಿಸಲಾಯಿತು.

ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಪ್ರವಾಹದಿಂದ ಸಂತ್ರಸ್ತರಾದವರು, ವನವಾಸಿಗರಿಗೆ ಸಾಂತ್ವನ ಹೇಳಿದ್ದಾರೆ. ವೈದ್ಯರ ತಂಡವು ಕಲ್ಲೇಶ್ವರ, ಶೇವ್ಕಾರ್, ಹೆಗ್ಗಾರ, ಕನಕನಳ್ಳಿ, ವೈದ್ಯ ಹೆಗ್ಗಾರ್‌, ವಸತಿ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿರುವವರ ಆರೋಗ್ಯ ತಪಾಸಣೆ ನಡೆಸಿದರು. 28 ರೈತರ ಮನೆಗಳಿಗೆ ವೈದ್ಯರು, ಮಠದ ಕಾರ್ಯಕರ್ತರು ಭೇಟಿ ನೀಡಿದರು. ಕೆಲವು ರೋಗಿಗಳನ್ನು ಯಲ್ಲಾಪುರ ಆಸ್ಪತ್ರೆ ಕರೆದೊಯ್ಯಲಾಯಿತು. ಕೆಲವಡೆಗಳಲ್ಲಿ ರಸ್ತೆಯಲ್ಲೇ ರೋಗಿಗಳು ಚಿಕಿತ್ಸೆ ಪಡೆದರು.

ವಸತಿ ಕೇಂದ್ರಗಳ ಐದು ಕಡೆಗಳಲ್ಲಿ ಕೃಷಿ ಕಾರ್ಮಿಕರ ಸಭೆ ನಡೆಸಲಾಯಿತು. ನೀರನ್ನು ಕಾಯಿಸಿ ಕುಡಿಯಬೇಕು. ರೋಗ–ರುಜಿನ ಹಬ್ಬದಂತೆ ಎಚ್ಚರಿಕೆ ವಹಿಸಬೇಕು. ಭಯಕ್ಕೆ ಒಳಗಾಗಬಾರದು ಎಂದು ವೈದ್ಯರು ಸಲಹೆ ನೀಡಿದರು.

‘ಮಠದಲ್ಲಿ ನಡೆಯುವ ಅನ್ನದಾನಕ್ಕೆ ನಾವು ತೆಂಗಿನಕಾಯಿ, ಧಾನ್ಯ ನೀಡುತ್ತಿದ್ದೆವು. ಈಗ ಕಷ್ಟಕಾಲದಲ್ಲಿ ಮಠ ನಮಗೆ ನರವಾಗಿದೆ’ ಎಂದು ಸಂತ್ರಸ್ತರು ಹೇಳಿದರು.

ಡಾ.ಶಿವರಾಮ ಕೆ.ವಿ, ಡಾ.ಜಿ.ಎಂ.ಹೆಗಡೆ, ಡಾ.ರಮೇಶ ಹೆಗಡೆ, ಡಾ.ತನುಶ್ರೀ ಹೆಗಡೆ, ಡಾ.ಮಮತಾ ಹೆಗಡೆ, ಡಾ.ಧರ್ಮಶಾಲಾ, ಡಾ.ಚಂದ್ರಶೇಖರ, ಮಠದ ಪ್ರಮುಖರಾದ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಅನಂತ ಅಶೀಸರ, ಸದಾನಂದ ಭಟ್ಟ ಹಳವಳ್ಳಿ, ನರಸಿಂಹ ಭಾಗವತ, ರಾಮಕೃಷ್ಣ ಭಟ್ ಕಲ್ಲೇಶ್ವರ ಇದ್ದರು.

ದ್ವೀಪವಾಗಿದ್ದ ಗಂಗಾವಳಿ ತಟದ ಹಳ್ಳಿಗಳ ಸಂಪರ್ಕಕ್ಕೆ ಇದ್ದ ಧೋರಣಗಿರಿ ರಸ್ತೆ, ಮತ್ತಿಘಟ್ಟ–ಕಮ್ಮಾಣಿ ರಸ್ತೆ ದುರ್ಗಮವಾಗಿವೆ. ಈ ರಸ್ತೆಯಲ್ಲೇ ಮುಂಡಗನಮನೆ ಸೊಸೈಟಿ ಅಧ್ಯಕ್ಷರು, ನಿರ್ದೇಶಕರು, ಅಲ್ಲಿನ ಯುವಕರ ತಂಡ ಸಾಗಿ, ನೆರೆಪೀಡಿತರಿಗೆ ಸಹಾಯ ಮಾಡುತ್ತಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT