ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಇ.ಎಸ್. ಅಭ್ಯರ್ಥಿ ವಿರುದ್ಧ ಕ್ರಮಕ್ಕೆ ಆಗ್ರಹ

Published 17 ಏಪ್ರಿಲ್ 2024, 13:37 IST
Last Updated 17 ಏಪ್ರಿಲ್ 2024, 13:37 IST
ಅಕ್ಷರ ಗಾತ್ರ

ಗೋಕರ್ಣ: ಕಾರವಾರ, ಹಳಿಯಾಳ, ಜೊಯಿಡಾವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಹೇಳಿಕೆ ನೀಡಿರುವ ಎಂ.ಇ.ಎಸ್ ನ ನಿರಂಜನ್ ದೇಸಾಯಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ಗೋಕರ್ಣ ಘಟಕ ಒತ್ತಾಯಿಸಿದೆ.

ನಿರಂಜನ ದೇಸಾಯಿ ನಾಮಪತ್ರ ಸಲ್ಲಿಕೆಯ ವೇಳೆ ನಾಡದ್ರೋಹದ ಮಾತನಾಡಿದ್ದು, ಅನಾವಶ್ಯಕವಾಗಿ ಜನರಲ್ಲಿ ಗೊಂದಲದ ವಾತಾವರಣ ನಿರ್ಮಿಸುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಗೂ ವಿರುದ್ಧವಾದದ್ದು, ಜೊಯಿಡಾದಲ್ಲಿ ಯಾರೂ ಕೂಡಾ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಹೇಳುತ್ತಿಲ್ಲ. ಈ ಭಾಗದ ಎಲ್ಲ ಜನರು ಕನ್ನಡ ನಾಡಿಗೆ ನಿಷ್ಠರಾಗಿ ಬದುಕುತ್ತಿದ್ದಾರೆ. ಹೀಗಿರುವಾಗ ನಿರಂಜನ ದೇಸಾಯಿ ಅನಾವಶ್ಯಕವಾಗಿ ಚುನಾವಣೆಯ ವೇಳೆ ಗಡಿ, ನುಡಿಯ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವುದು ಖಂಡನಾರ್ಹವಾದದ್ದು ಎಂದರು.

ಪದೇ ಪದೇ ಇಂತಹ ಹೇಳಿಕೆ ನೀಡುತ್ತಿರುವ ಎಂಇಎಸ್‌ನ ನಿರಂಜನ್ ದೇಸಾಯಿ ಮತ್ತಿರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕರ್ನಾಟಕದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಿಸಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ ನಾಯ್ಕ್ ಒತ್ತಾಯಿಸಿದ್ದಾರೆ.

ಕರವೇ ಯುವ ಘಟಕ ಅಧ್ಯಕ್ಷ ಕುಮಾರ ದೀವಟಿಗೆ, ವಸಂತ್ ಶೆಟ್ಟಿ, ವಿನೋದ್ ನಾಯ್ಕ್, ವಿಜಯ ಮುಕ್ರಿ, ನಾಗು ಹೊಸನಗರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT