ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿರ್ಜಾನ್‌: ಬೇಕಿದೆ ರೈಲು ನಿಲುಗಡೆ ವ್ಯವಸ್ಥೆ

ಎಲ್ಲ ಸೌಲಭ್ಯಗಳಿರುವ ಕ್ರಾಸಿಂಗ್ ನಿಲ್ದಾಣ; ಬಳಕೆಗೆ ಒದಗಿಸಲು ಆಗ್ರಹ
Published 5 ನವೆಂಬರ್ 2023, 5:06 IST
Last Updated 5 ನವೆಂಬರ್ 2023, 5:06 IST
ಅಕ್ಷರ ಗಾತ್ರ

ಕೊಂಕಣ ರೈಲು ಮಂಡಳಿ ಮಾಜಿ ಸದಸ್ಯ ರಾಜೀವ ಗಾಂವ್ಕರ್, ಕುಮಟಾ: ಕುಮಟಾ ತಾಲ್ಲೂಕಿನ ಮಿರ್ಜಾನ್‌ನಲ್ಲಿ ಕೆಲ ವರ್ಷಗಳ ಹಿಂದೆ ನಿರ್ಮಾಣವಾದ ಕೊಂಕಣ ರೈಲ್ವೆ ಕ್ರಾಸಿಂಗ್ ನಿಲ್ದಾಣವನ್ನು ಪ್ರಯಾಣಿಕರ ನಿಲ್ದಾಣವಾಗಿ ಬಳಕೆ ಮಾಡಿಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಎಂಟು ವರ್ಷಗಳ ಹಿಂದೆ ಕೇಂದ್ರ ರೈಲ್ವೆ ಸಚಿವ ಸುರೇಶ ಪ್ರಭು ಈ ಕ್ರಾಸಿಂಗ್ ನಿಲ್ದಾಣಕ್ಕೆ ಶಿಲಾನ್ಯಾಸ ಮಾಡಿದ್ದರು. ವೇಗದ ರೈಲುಗಳು ಓಡಾಡಲು ಅನುಕೂಲವಾಗುವಂತೆ ಉಳಿದ ರೈಲುಗಳ ನಿಲುಗಡೆಯ ಉದ್ದೇಶದಿಂದ ಇಲ್ಲಿ ಕ್ರಾಸಿಂಗ್ ನಿಲ್ದಾಣ ನಿರ್ಮಿಸಲಾಗಿದೆ.

‘ನಿಲ್ದಾಣದಲ್ಲಿ ಕುಳಿತುಕೊಳ್ಳಲು ಉತ್ತಮ ಆಸನ, ಶೌಚಾಲಯ ವ್ಯವಸ್ಥೆ ಇದೆ. ನಿಲ್ದಾಣದ ಸಿಬ್ಬಂದಿ ಸುತ್ತಲೂ ಉದ್ಯಾನ ನಿರ್ಮಿಸಿ ಪರಿಸರವನ್ನು ಸುಂದರಗೊಳಿಸಿದ್ದಾರೆ. ಆದರೆ ನಿಲ್ದಾಣಕ್ಕೆ ಪ್ರಯಾಣಿಕರೇ ಹೋಗದಿರುವುದರಿಂದ ಅದನ್ನು ಯಾರೂ ಬಳಸುತ್ತಿಲ್ಲ. ಮಡಗಾಂವ್- ಮಂಗಳೂರು ನಡುವೆ ಓಡಾಡುವ ಮೆಮು ರೈಲು, ಪ್ಯಾಸೆಂಜರ್ ರೈಲು, ಕಾರವಾರ- ಬೆಂಗಳೂರು ರೈಲುಗಳಿಗೆ ನಿಲುಗಡೆ ನಿಡಿದರೂ ಸ್ಥಳೀಯರ ಓಡಾಟಕ್ಕೆ ಅನುಕೂಲವಾಗುತ್ತದೆ. ನಿಲ್ದಾಣದಿಂದ ಸಮೀಪದ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಯನ್ನೂ ಅಭಿವೃದ್ಧಿಗೊಳಿಸಬೇಕಿದೆ. ಈ ಬಗ್ಗೆ ರೈಲ್ವೆ ಮಂಡಳಿಗೂ ಮನವಿ ಸಲ್ಲಿಸಲಾಗಿದೆ’ ಎಂದು ಸಮೀಪದ ಕೊಡಕಣಿ ನಿವಾಸಿ ಅರವಿಂದ ಶಾನಭಾಗ ತಿಳಿಸಿದರು.

‘ರೈಲ್ವೆ ಕ್ರಾಸಿಂಗ್ ಉದ್ದೇಶದಿಂದ ನಿರ್ಮಿಸಿದ್ದ ಮಿರ್ಜಾನ್ ನಿಲ್ದಾಣದಲ್ಲಿ ಪ್ರಯಾಣಿಕರ ನಿಲ್ದಾಣದ ಎಲ್ಲ ಸೌಲಭ್ಯಗಳಿವೆ. ಕೇವಲ ಕ್ರಾಸಿಂಗ್ ಉದ್ದೇಶಕ್ಕೆ ಕೊಂಕಣ ರೈಲು ನಿಗಮ ಕಟ್ಟಡ, ಆಸನ, ಶೌಚಾಲಯ ಮುಂತಾದ ಸೌಲಭ್ಯ ಕಲ್ಪಿಸುವ ಅಗತ್ಯವಿತ್ತೇ?’ ಎಂದು ಪ್ರಶ್ನಿಸುತ್ತಾರೆ ಕೊಂಕಣ ರೈಲು ಮಂಡಳಿ ಮಾಜಿ ಸದಸ್ಯ ರಾಜೀವ ಗಾಂವ್ಕರ್.

‘ಸುತ್ತಲಿನ ಮಿರ್ಜಾನ್ , ಕೊಡಕಣಿ, ಬರ್ಗಿ, ಕಿಮಾನಿಯಿಂದ ನಿತ್ಯ ಹಲವರು ಆಸ್ಪತ್ರೆ, ಉದ್ಯೋಗ, ವ್ಯವಹಾರದ ಉದ್ದೇಶಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಾರೆ. ರೈಲು ಹಿಡಿಯಲು ದೂರದ ಕುಮಟಾ ಅಥವಾ ಗೋಕರ್ಣ ನಿಲ್ದಾಣಕ್ಕೆ ಹೋಗುವ ಬದಲು ಮಿರ್ಜಾನ್ ನಿಲ್ದಾಣದಲ್ಲೇ ಪ್ಯಾಸೆಂಜರ್ ಹಾಗೂ ಮೆಮು ರೈಲಿಗೆ ನಿಲುಗಡೆ ನೀಡಿದರೆ ಅನುಕೂಲವಾಗುತ್ತದೆ. ಈಗಾಗಲೇ ಈ ಬಗ್ಗೆ ರೇಲು ಮಂಡಳಿಗೆ ಮನವಿ ನೀಡಲಾಗಿದ್ದು, ಕೊಂಕಣ ರೈಲು ಮಂಡಳಿ ಸದಸ್ಯ ಶಾಸಕ ಸತೀಶ ಸೈಲ್ ಅವರೊಂದಿಗೆ ಸಂಬಂಧಿಸಿದ ಹಿರಿಯ ಅಧಿಕಾರಿಯನ್ನೂ ಭೇಟಿ ಮಾಡಿ ಚರ್ಚಿಸುವೆ’ ಎನ್ನುತ್ತಾರೆ ರಾಜೀವ.

ಮಿರ್ಜಾನ್‌ ನಿಲ್ದಾಣದಲ್ಲಿ ಕನಿಷ್ಠ ಎರಡು ರೈಲುಗಳಿಗೆ ನಿಲುಗಡೆ ನೀಡುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡುತ್ತೇನೆ ದಿನಕರ ಶೆಟ್ಟಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT