ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸಾಧನೆಯೇ ಕಾಂಗ್ರೆಸ್‌ ತಿರಸ್ಕಾರಕ್ಕೆ ಕಾರಣ: ಚಕ್ರವರ್ತಿ ಸೂಲಿಬೆಲೆ

Published 14 ಏಪ್ರಿಲ್ 2024, 13:59 IST
Last Updated 14 ಏಪ್ರಿಲ್ 2024, 13:59 IST
ಅಕ್ಷರ ಗಾತ್ರ

ಭಟ್ಕಳ: ಪಟ್ಟಣದ ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾ ಭವನದಲ್ಲಿ ಶನಿವಾರ ನಡೆದ ‘ನಮೋ ಭಾರತ-ಈಗ ಶುರುವಾಗಿದೆ ಭಾರತದ ಕಾಲ’ ಎನ್ನುವ  ವಿಷಯದ ಕುರಿತು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು.

ದೇಶದಲ್ಲಿ ಜನ ನೆಮ್ಮದಿಯಿಂದಿರಲು ಮೋದಿಜಿಯವರೇ ಏಕೆ ಬೇಕು ಎನ್ನುವ ಕುರಿತು ಬೆಳಕು ಚೆಲ್ಲಿದ ಅವರು ಮೋದಿಜಿಯವರ ಸಾಧನೆಯೇ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲು ಇರುವ ಮುಖ್ಯ ಕಾರಣವಾಗಿದೆ ಎಂದರು.

‘ಕುಕ್ಕರ್ ಸ್ಫೋಟ ಮಾಡಿದವರನ್ನು ಬ್ರದರ್ಸ್ ಎಂದು ಕರೆಯುವ ಕಾಂಗ್ರೆಸ್ ಪಕ್ಷದವರು,  ದುಷ್ಕೃತ್ಯ ಮಾಡುವವರನ್ನು ರಕ್ಷಣೆ ಮಾಡಿ ಉಳಿಸುವ ಪ್ರಯತ್ನ ಮಾಡಿದಂತಾಗುತ್ತದೆ. ಇದರಿಂದ ಮತ್ತಷ್ಟು ದುಷ್ಕೃತ್ಯಗಳು ನಡೆಯುವ ಸಾಧ್ಯತೆ ಇರುತ್ತದೆ. ಆದರೆ ಬೆಂಗಳೂರಿನಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕೆಲವೇ ದಿನಗಳಲ್ಲಿ ಬಂಧಿಸಲಾಯಿತು. ಇಲ್ಲಿ ಬಾಂಬ್‌ ಸ್ಫೋಟ ಮಾಡಿದವರು ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ ಎನ್ನುವ ಸಂದೇಶ ಹೋದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT