ಹೊನ್ನಾವರ:ದಿನವೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದಅಪ್ಪನನ್ನು ಅಮ್ಮ ಕೊಲೆ ಮಾಡಿದ್ದಾಗಿ ಮಗನೇ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದಾರೆ.

ತಾಲ್ಲೂಕಿನ ಕಾನಗೋಡ ಎಂಬಲ್ಲಿ ಗುರುವಾರ ರಾತ್ರಿ ಮಂಜು ಹನ್ಮಂತ ನಾಯ್ಕ (58) ಎಂಬುವವರ ಕೊಲೆಯಾಗಿತ್ತು.

‘ಹನ್ಮಂತ ನಾಯ್ಕ ದಿನವೂಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಗುರುವಾರ ರಾತ್ರಿ ಹೆಂಡತಿ ಮೇಲೆ ಹಲ್ಲೆಗೆ ಮುಂದಾಗಿದ್ದ. ಹೆಂಡತಿ ಲಕ್ಷ್ಮಿಯನ್ನು ಮನೆಯಿಂದ ಹೊರ ಹಾಕುವುದಾಗಿ ಬೆದರಿಕೆ ಒಡ್ಡಿದ್ದ. ಇದರಿಂದಸಿಟ್ಟಾದ ಆಕೆ ದೊಣ್ಣೆಯಿಂದ (ಸೊಟ್ಟ) ಆತನ ತಲೆಗೆ ಹೊಡೆದಳು. ಗಂಭೀರವಾಗಿ ಗಾಯಗೊಂಡ ಹನ್ಮಂತ ಮೃತಪಟ್ಟರು’ ಎಂದು ದೂರಿನಲ್ಲಿ ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.

ಪಿಎಸ್ಐ ತೇಜಸ್ವಿ.ಟಿ.ಐ ಹಾಗೂ ಸಿಪಿಐ ಚೆಲುವರಾಜು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.