ಯಲ್ಲಾಪುರ: 'ಸಮಾಜದ ಉನ್ನತಿಗಾಗಿ ಬದುಕಿನುದ್ದಕ್ಕೂ ಅಪಾರ ಪರಿಶ್ರಮಪಟ್ಟ ನಾ.ಸು. ಅವರದು ಸಾರ್ಥಕ ಬದುಕು. ತಮ್ಮ ನಾಮಧೇಯದೊಂದಿಗೆ ಸೀಮೆಯ ಹೆಸರನ್ನು ಜೋಡಿಸಿಕೊಂಡು ತಮ್ಮ ಊರನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಅವರು, ಜಿಲ್ಲೆಯ ಹಿರಿಯ ಸಾಹಿತಿಗಳ ಪೈಕಿ ಕೊನೆಯ ಕೊಂಡಿಯಾಗಿದ್ದರು' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಕೇಂದ್ರೀಕರಣ ಸಮಿತಿ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.

ತಾಲ್ಲೂಕಿನ ಭರತನಹಳ್ಳಿಯಲ್ಲಿ ನಾ.ಸು.ಭರತನಹಳ್ಳಿ ಅವರ ಅಭಿಮಾನಿ ಬಳಗವು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ನಾ.ಸು. ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಸಾಹಿತ್ಯ ಸಾಮ್ರಾಜ್ಯ ಕಟ್ಟಿದ ಅವರ ಹೆಸರುಚಿರಸ್ಥಾಯಿಯಾಗಿ ಉಳಿಯಲು ಯಾವುದಾದರು ಸೂಕ್ತ ಯೋಜನೆ ರೂಪಿಸಬೇಕೆಂದು ಸಲಹೆ ನೀಡಿದರು.

ಎಂಎಲ್‌ಸಿ ಶಾಂತಾರಾಮ ಸಿದ್ದಿ ಮಾತನಾಡಿದರು.ನಾ. ಸು. ಕುರಿತಾಗಿ ಉಮ್ಮಚಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಡಿ,ತಾಳಮದ್ದಲೆ ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ, ವಕೀಲ ಜಿ.ಎಸ್. ಹೆಗಡೆ ಹಸಲ್ಮನೆ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷವೇಣುಗೋಪಾಲ ಮದ್ಗುಣಿ, ಶ್ರೀಮಾತಾ ಸಂಸ್ಕೃತ ಪಾಠಶಾಲೆಯ ಅಧ್ಯಕ್ಷ ಟಿ.ವಿ.ಹೆಗಡೆ ಬೆದೆಹಕ್ಕಲು, ಪ್ರಗತಿ ವಿದ್ಯಾಲಯದ ಮುಖ್ಯ ಶಿಕ್ಷಕ ವಿನಾಯಕ ಹೆಗಡೆ, ಪ್ರಮುಖರಾದ ಎನ್.ಜಿ. ಹೆಗಡೆ ಭಟ್ರಕೇರಿ, ನಾ.ಸು ಅಳಿಯ ರಾಮಕೃಷ್ಣ ಐನಕೈ, ಸಂತೋಷ ಶೇಟ್, ಎಂ.ಆರ್. ಹೆಗಡೆ ತಾರೇಹಳ್ಳಿ, ನಾಗವೇಣಿ ಗೌಡ ಮಾತನಾಡಿದರು. ಸಂಘಟಕ ಕುಂದರಗಿ ಸೇ.ಸ.ಸಂಘದ ಅಧ್ಯಕ್ಷ ಹೇರಂಬ ಹೆಗಡೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.