ಶಿರಸಿ: ಇಲ್ಲಿನ ದೇವಿಕೆರೆಯಲ್ಲಿರುವ ವಿಜಯಾ ಬ್ಯಾಂಕ್ ಶಾಖೆಯನ್ನು ಸ್ಥಳಾಂತರ ಮಾಡದೆ, ಇಲ್ಲಿಯೇ ಉಳಿಸಬೇಕು ಎಂದು ಒತ್ತಾಯಿಸಿ, ಗ್ರಾಹಕರು ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ವಿಜಯಾ ಬ್ಯಾಂಕ್ ಶಾಖೆಯ ಸಹಾಯಕ ವ್ಯವಸ್ಥಾಪಕ ಅಪ್ಪು ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಹಲವಾರು ವರ್ಷಗಳಿಂದ ಗ್ರಾಹಕರಾಗಿರುವ ಅನೇಕರಿಗೆ ಈ ಬ್ಯಾಂಕ್ ಶಾಖೆಯಿಂದ ಅನುಕೂಲಗಳಾಗಿವೆ. ಇಲ್ಲಿನ ವ್ಯವಹಾರ ಕೂಡ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಈಗ ಏಕಾಏಕಿ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆ ನೆಪವೊಡ್ಡಿ, ಈ ಶಾಖೆಯನ್ನು ಹೊಸಪೇಟೆ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ವರ್ಗಾಯಿಸುತ್ತಿರುವುದು ವ್ಯವಹಾರದ ದೃಷ್ಟಿಯಿಂದ ತೊಂದರೆಯಾಗುತ್ತದೆ. ಬ್ಯಾಂಕ್ ಆಫ್ ಬರೋಡಾ ಶಾಖೆ ಇರುವಲ್ಲಿ ಈಗಾಗಲೇ ಇನ್ನೆರಡು ಬ್ಯಾಂಕ್ ಇರುವುದರಿಂದ ವ್ಯವಹಾರ ಅಷ್ಟಾಗಿ ನಡೆಯುವುದಿಲ್ಲ. ಒಂದೊಮ್ಮೆ ಈ ಶಾಖೆಯನ್ನು ಅಲ್ಲಿಗೆ ಸ್ಥಳಾಂತರಿಸಿದರೆ, ಇಲ್ಲಿರುವ ಗ್ರಾಹಕರು, ಈ ಬ್ಯಾಂಕ್ ಖಾತೆಯನ್ನು ರದ್ದುಗೊಳಿಸಲು ತೀರ್ಮಾನಿಸಿದ್ದಾರೆ. ಇದರಿಂದ ಬ್ಯಾಂಕ್ಗೆ ನಷ್ಟವಾಗುತ್ತದೆ. ಪ್ರಸ್ತುತ ಇರುವ ವಿಜಯಾ ಬ್ಯಾಂಕ್ ಶಾಖೆಯು ಬಸ್ ನಿಲ್ದಾಣಕ್ಕೂ ಹತ್ತಿರವಿದೆ. ಹೀಗಾಗಿ ಇದನ್ನು ಇಲ್ಲಿಯೇ ಉಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಬ್ಯಾಂಕ್ ಆಫ್ ಬರೋಡಾದ ಅಧ್ಯಕ್ಷ, ವಿಭಾಗ ವ್ಯವಸ್ಥಾಪಕ, ಪ್ರಾದೇಶಿಕ ವ್ಯವಸ್ಥಾಪಕರಿಗೆ ಈ ಮನವಿಪತ್ರವನ್ನು ಕಳುಹಿಸಲಾಗಿದೆ. ಬ್ಯಾಂಕ್ ಗ್ರಾಹಕರಾದ ಮಹೇಶ ನಾಯ್ಕ, ಎಂ.ಎಸ್.ಹೆಗಡೆ, ಗಣಪತಿ ಹೆಗಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.