ಕುಮಟಾ: ದೇಶದ ಯಾವುದೇ ನಿರ್ದಿಷ್ಟ ಸಮುದಾಯವನ್ನು ಒಲೈಸದೆ ನರೇಂದ್ರ ಮೋದಿ ಸರ್ಕಾರ ದೇಶದ ಎಲ್ಲ 140 ಕೋಟಿ ಜನರ ಕಾಳಜಿಯನ್ನು ಆದ್ಯತೆಯಾಗಿಸಿಕೊಂಡಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸೋಮವಾರ ಇಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 11 ವರ್ಷದ ಸಾಧನೆಯ ವೃತ್ತಿಪರರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

`2047ನೇ ಹೊತ್ತಿಗೆ ಜಗತ್ತಿನ ಅಭಿವೃದ್ಧಿ ಹೊಂದಿದ ಪ್ರಮುಖ ರಾಷ್ಟ್ರಗಳ ಸಾಲಿನಲ್ಲಿ ಕಂಗೊಳಿಸುವುದು ಭಾರತದ ಗುರಿಯಾಗಿದೆ. ಸದ್ಯ ಶೇ 6.3 ಜಿಡಿಪಿಯೊಂದಿಗೆ ಜಗತ್ತಿನ ನಾಲ್ಕನೇ ಅತಿದೊಡ್ಡ ಅರ್ಥಿಕ ಶಕ್ತಿ ಎನಿಸಿಕೊಂಡಿರುವ ಭಾರತ ಇನ್ನು ಕೆಲವೇ ವರ್ಷಗಳಲ್ಲಿ ಮೂರನೇ ಶಕ್ತಿಯಾಗಿ ಹೊರಹೊಮ್ಮಲಿದೆ’ ಎಂದರು.

`ವಂದೇ ಭಾರತ್ ಎಕ್ಸ್ಪ್ರೆಸ್ ರೇಲ್ವೆ, ಮೆಟ್ರೋ ರೈಲು ಸೇವೆ ಸಂಪರ್ಕ ಕ್ರಾಂತಿ ಮಾಡಿದೆ. ಹಣಕಾಸು ಡಿಜಿಟಲೀಕರಣ, ಜಿಎಸ್ಟಿ ಅನುಷ್ಠಾನ ಪದ್ಧತಿ ನಾವೇ ಅಚ್ಚರಿಗೊಳ್ಳವಷ್ಟರ ಮಟ್ಟಿಗೆ ಜನ ಜೀವನದಲ್ಲಿ ಹಾಸುಹೊಕ್ಕಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ಜಗತ್ತಿನಲ್ಲಿಯೇ ಅತಿ ಹೆಚ್ಚು ಯುವ ಸಂಪನ್ಮೂಲ ಹೊಂದಿದ ಭಾರತ ಯುವ ದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವುದು ವಿಶೇಷ’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್. ಹೆಗಡೆ, ಮುಖಂಡರಾದ ವೆಂಕಟೇಶ ನಾಯಕ, ರವಿಹೆಗಡೆ ಹೂವಿನಮನೆ, ಶಿವಾನಿ ಶಾಂತಾರಾಂ, ಈಶ್ವರ ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕರಾದ ಸುನಿಲ್ ಹೆಗಡೆ, ಸುನಿಲ ನಾಯ್ಕ, ಪುರಸಭೆ ಅಧ್ಯಕ್ಷೆ ಸುಮತಿ ಭಟ್ಟ, ಉಪಾಧ್ಯಕ್ಷ ಮಹೇಶ ನಾಯ್ಕ, ಜಿ.ಐ. ಹೆಗಡೆ ಇದ್ದರು. ಎಂ.ಜಿ. ಭಟ್ಟ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಹೆಮ್ಮೆಯಿಂದ ಹೇಳಿಕೊಳ್ಳವ ಸಂದರ್ಭ ಬರಲಿದೆ

‘ದೇಶದಲ್ಲಿ 400 ವಿವಿ 8 ಸಾವಿರ ಕಾಲೇಜು ಸ್ಥಾಪನೆ ರೈತರಿಗೆ ಪ್ರತೀ ವರ್ಷ ₹ 6 ಸಾವಿರ ಪಿ.ಎಂ. ಕಿಸಾನ್ ಯೋಜನೆಯ ನೆರವು ಆದಾಯ ಮಿತಿ ₹12 ಲಕ್ಷಕ್ಕೇರಿರುವುದು ಜನಸಾಮಾನ್ಯರಿಗೆ ಮೋದಿ ಸರ್ಕಾರ ನೀಡಿದ ಕೊಡುಗೆಯಾಗಿದೆ. ಪಾಕಿಸ್ತಾದ ಇತ್ತೀಚಿನ ಅಕ್ರಮಣದ ನಂತರ ಸಿಂದೂ ನದಿ ನೀರಿನ ಒಪ್ಪಂದ ಅಮಾನತುಗೊಳಿಸಿರುವುದು. ಭಯೋತ್ಪಾದನೆ ನಿಲ್ಲಿಸದಿದ್ದರೆ ಏನಾಗುತ್ತದೆ ಎನ್ನುವುದನ್ನು ಭಾರತ ತೋರಿಸಿಕೊಟ್ಟಿದೆ. ರಷ್ಯಾ-ಉಕ್ರೇನ್ ಯುದ್ಧ ಸಂದರ್ಭದಲ್ಲಿ ಎರಡೂ ದೇಶದಲ್ಲಿದ್ದ ಭಾರತೀಯರನ್ನು ತಕ್ಷಣ ಸುರಕ್ಷಿತವಾಗಿ ಕರೆದುಕೊಂಡು ಬಂದಿರುವುದು ಭಾರತದ ಶಕ್ತಿ ಹಾಗೂ ಪ್ರಭಾವದ ಪ್ರತೀಕ. ಸರ್ಕಾರದ ಈ ಎಲ್ಲ ಕೆಲಸಗಳನ್ನು ಬಿಜೆಪಿ ಕಾರ್ಯಕರ್ತರು ಜನರ ಎದುರು ನಿಂತು ಹೆಮ್ಮೆಯಿಂದ ಹೇಳಿಕೊಳ್ಳಲಿದ್ದಾರೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.