ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಮಾರಿಕಾಂಬಾ ದೇಗುಲದಲ್ಲಿ ಶರನ್ನವರಾತ್ರಿ ಸಿದ್ಧತೆ

Published : 13 ಸೆಪ್ಟೆಂಬರ್ 2024, 14:23 IST
Last Updated : 13 ಸೆಪ್ಟೆಂಬರ್ 2024, 14:23 IST
ಫಾಲೋ ಮಾಡಿ
Comments

ಶಿರಸಿ: ನಗರದ ಮಾರಿಕಾಂಬಾ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ‌ ಉತ್ಸವ ಅಕ್ಟೋಬರ್‌ 3ರಿಂದ 12ರವರೆಗೆ ಜರುಗುವ ಹಿನ್ನೆಲೆಯಲ್ಲಿ ವಿವಿಧ‌ ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ. 

ಶುಕ್ರವಾರ ದೇವಾಲಯದಲ್ಲಿ ಧರ್ಮದರ್ಶಿ ಮಂಡಲದ ಉಪಾಧ್ಯಕ್ಷ ಸುದೇಶ  ಜೋಗಳೇಕರ್,  ಧರ್ಮದರ್ಶಿಗಳಾದ ಸುಧೀರ್ ಹಂದ್ರಾಳ, ವತ್ಸಲಾ ಹೆಗಡೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾಹಿತಿ ನೀಡಿದರು‌.

ಸೆ.14ರಿಂದ 16ರವರೆಗೆ ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರಿಗಾಗಿ ಕೊಕ್ಕೊ ಸ್ಪರ್ಧೆ, ಕಬಡ್ಡಿ ಹಾಗೂ ವಾಲಿಬಾಲ್ ಸ್ಪರ್ಧೆ ನಡೆಯಲಿದೆ. 18 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆಯಿದೆ. ನಗರದ ಅರಣ್ಯ ಭವನದಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆ ನಡೆಯಲಿದೆ. 40ರಿಂದ 60 ವರ್ಷ ವಿಭಾಗಧಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಓಟದ ಸ್ಪರ್ಧೆ, ಗುಂಡು ಎಸೆತ, ನಡಿಗೆ, ಬಾಲ್ ಎಸೆತ ಸ್ಪರ್ಧೆ ಏರ್ಪಡಿಸಲಾಗಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಓಟ, ಗುಂಡು ಎಸೆತ, ನಡಿಗೆ ಸ್ಪರ್ಧೆಯಿದೆ. ಎಲ್ಲರೂ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕಾಗಿದ್ದು, ಏಕಕಾಲದಲ್ಲಿ ಮೂರು ದಿನಗಳ ಕಾಲ‌ ಕ್ರೀಡಾ ಸ್ಪರ್ಧೆ ನಡೆಯಲಿದೆ ಎಂದರು.   

ನವರಾತ್ರಿ ಉತ್ಸವದ ನಿಮಿತ್ತ ಸೆ.29ರಂದು ಬೆಳಿಗ್ಗೆ 9 ರಿಂದ 6 ಗಂಟೆಯವರೆಗೆ ಚದುರಂಗ ಸ್ಪರ್ಧೆ, ಅ.3ರಂದು ರಂಗವಲ್ಲಿ ಸ್ಪರ್ಧೆ, ಭಕ್ತಿಗೀತೆ, ಅ.4ರಂದು ಹಳ್ಳಿಯ ಹಾಡುಗಳ ಸ್ಪರ್ಧೆ, ಭಾವಗೀತೆ ಸ್ಪರ್ಧೆ, ಅ.5ರಂದು ಧ್ಯಾನ ಮಾಲಿಕೆ, ಜಾನಪದ ಗುಂಪುನೃತ್ಯ ಸ್ಪರ್ಧೆ, ಅ.6ರಂದು ಆರತಿ ತಾಟಿನ ಸ್ಪರ್ಧೆ, ಶಾಸ್ತ್ರೀಯ ನೃತ್ಯ, ಅ.7ರಂದು ಕರಕುಶಲ ವಸ್ತುಗಳ ಪ್ರದರ್ಶನ, ಅಂಗನವಾಡಿ ಮಕ್ಕಳ ನೃತ್ಯ ಸ್ಪರ್ಧೆ, ಅ.8ರಂದು ಸಮೂಹ ದೇಶ ಭಕ್ತಿಗೀತೆ ಸ್ಪರ್ಧೆ, ಅಂಗನವಾಡಿ ಮಕ್ಕಳ ನೃತ್ಯ ಸ್ಪರ್ಧೆ, ಸಾಮಾನ್ಯ ಜ್ಞಾನ ಪರೀಕ್ಷೆ, ಅ.9ರಂದು ಭಗವದ್ಗೀತೆ ಶ್ಲೋಕ ಕಂಠಪಾಠ ಸ್ಪರ್ಧೆ, ಜಾನಪದ ಹಾಡುಗಳ ಸ್ಪರ್ಧೆ, ಅ.10ರಂದು ಚಿತ್ರಕಲಾ ಸ್ಪರ್ಧೆ, ಚಿಕ್ಕಮಕ್ಕಳ ಫ್ಯಾನ್ಸಿ ಡ್ರೆಸ್ ಸ್ಪರ್ಧೆ, ಅ.11ರಂದು ಚಿತ್ರಕಲಾ ಸ್ಪರ್ಧೆ, ಚಿಕ್ಕಮಕ್ಕಳ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ನಡೆಯಲಿದೆ ಎಂದರು.

ಅ.3ರಂದು ಮುಂಜಾನೆ ಭಜನೆ, 8ರಿಂದ‌ ಸಪ್ತಶತಿ ಪಾರಾಯಣ‌ ನಡೆಯಲಿದೆ. ಸಂಜೆ 7ರಿಂದ ಕೀರ್ತನೆ ನಡೆಯಲಿದೆ. 3ರಿಂದ 11ರ ತನಕ ವಿವಿಧ ಸ್ಪರ್ಧೆಗಳು ನಡೆಯಲಿದೆ. ಅ.12 ವಿಜಯ ದಶಮಿಯಂದು ಪಡಲಿಗೆ ಉತ್ಸವ, ಸೀಮೋಲ್ಲಂಘನ, ಪಲ್ಲಕ್ಕಿ ಉತ್ಸವ, ಹನುಮಂತ ದೇವರ ಪಲ್ಲಕ್ಕಿ ಮೆರವಣಿಗೆ ಹಾಗೂ ರಾತ್ರಿ 10 ಗಂಟೆಯ ನಂತರ ಕೋಟೆಕೆರೆಯ ಗದ್ದುಗೆಯ ಮೇಲೆ ಮಾರಿಕಾಂಬಾ ದೇವಿಯ ಪಲ್ಲಕ್ಕಿ ಉತ್ಸವ, ಕಲಶ ವಿಸರ್ಜನೆ, ಪಡಿಯಾಟ ಇತರ ವಿಧಿವಿಧಾನಗಳು ನಡೆಯಲಿದೆ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT