ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ: ಭಾರಿ ಮಳೆಯ ಎಚ್ಚರಿಕೆ

ಮನೆಗಳಿಗೆ ನುಗ್ಗಿದ ಹಳ್ಳದ ನೀರು: ಹೊಳೆಯಂತಾದ ಪಟ್ಟಣದ ರಸ್ತೆ
Last Updated 22 ಜೂನ್ 2019, 14:08 IST
ಅಕ್ಷರ ಗಾತ್ರ

ಅಂಕೋಲಾ:ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆತಾಲ್ಲೂಕಿನಲ್ಲಿ ನದಿ, ಹಳ್ಳಗಳು ಉಕ್ಕಿ ಹರಿಯುತ್ತಿವೆ.ಕೃಷಿ ಭೂಮಿ ಮತ್ತು ಜನವಸತಿ ಪ್ರದೇಶಗಳು ಜಲಾವೃತಗೊಂಡಿವೆ.ಮುಂದಿನ 24 ಗಂಟೆ ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ ಎಂದು ತಾಲ್ಲೂಕು ಆಡಳಿತಎಚ್ಚರಿಕೆ ನೀಡಿದೆ.

ಗಂಗಾವಳಿ ನದಿ ಪಾತ್ರದಲ್ಲಿರುವ ವಾಸರೆ, ಕೊಡ್ಸಣಿ ಮತ್ತು ಕುರ್ವೆ ದ್ವೀಪಗಳಲ್ಲಿಪ್ರವಾಹದಭೀತಿ ಎದುರಾಗಿದೆ. ಪೂಜಗೇರಿ ಹಳ್ಳ ಉಕ್ಕಿ ಹರಿದುಪೂಜಗೇರಿ ಮತ್ತು ನದಿಬಾಗ ಗ್ರಾಮಗಳಲ್ಲಿ ಕೃಷಿ ಭೂಮಿಗೆ ನೀರು ನುಗ್ಗಿದೆ. ಹಳ್ಳದ ನೀರು ಸಮುದ್ರ ಸೇರುವ ಜಾಗದಲ್ಲಿ ಸಮುದ್ರದ ಅಲೆಗಳ ರಭಸಕ್ಕೆ ಮರಳಿನಿಂದ ಮುಚ್ಚಿದೆ.ಇದರಿಂದಾಗಿ ಈ ಭಾಗದಲ್ಲಿರುವ 50ಕ್ಕೂ ಹೆಚ್ಚುಮನೆಗಳು ಜಲಾವೃತಗೊಂಡಿವೆ.

ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಪಟ್ಟಣದರಸ್ತೆಗಳೆಲ್ಲ ನದಿಗಳಂತಾಗಿದ್ದವು. ಚರಂಡಿಗಳಲ್ಲಿ ಜಾಗ ಸಾಕಾಗದ ಕಾರಣ ರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಂತಿತ್ತು. ಪಾದಚಾರಿಗಳು ಮತ್ತು ವಾಹನ ಸವಾರರು ಸಂಚರಿಸಲು ಪರದಾಡಬೇಕಾಯಿತು. ಕೆಲವೆಡೆ ಅಂಗಡಿಗಳಿಗೂ ನೀರು ಹರಿಯಿತು.

ತಡೆಗೋಡೆ ಇಲ್ಲ:ಸಮುದ್ರದ ಅಲೆಗಳು ಅಪ್ಪಳಿಸುವ ಭಾಗದಲ್ಲಿ ಈ ಹಿಂದೆ ಹಾಕಿರುವ ತಡೆಗೋಡೆಯು ಅಲೆಗಳ ರಭಸಕ್ಕೆ ಕೊಚ್ಚಿಹೋಗಿದೆ. ಅಲೆಗಳ ರಭಸ ಹೆಚ್ಚಾದರೆ ನದಿಬಾಗದಲ್ಲಿ ನೀರು ನೇರವಾಗಿ ಮನೆಗಳಿಗೆ ನುಗ್ಗುತ್ತದೆ. ಆಗ ಈ ಪುಟ್ಟ ಗ್ರಾಮ ದ್ವೀಪವಾಗುತ್ತದೆ. ಇಲ್ಲಿಯ ಜನರಿಗೆ ಓಡಾಡಲು ದಾರಿ ಇಲ್ಲದೆ ಮನೆಯಲ್ಲೇಇರುವ ಸಂಕಷ್ಟ ಎದುರಾಗುತ್ತದೆ. ಯುವಕರು ಮನೆಗೆ ಬೇಕಾಗುವ ಸಾಮಗ್ರಿಯನ್ನು ಪಟ್ಟಣದಿಂದ ತರಲು ತಮ್ಮ ಜೀವವನ್ನು ಕೈಯಲ್ಲಿಟ್ಟುಕೊಂಡು ಎದೆಮಟ್ಟದವರೆಗಿನನೀರಿನಲ್ಲಿ ಸಾಗುತ್ತಾರೆ. ಈ ಭಾಗಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಸ್ಥಳೀಯರ ಹಲವು ವರ್ಷಗಳ ಬೇಡಿಕೆಯಾಗಿದೆ.

ನೆರೆ ಭೀತಿ: ಉತ್ತಮ ಮಳೆಯಿಂದ ಗಂಗಾವಳಿ ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಿದೆ. ಮಳೆ ಇದೇರೀತಿ ಮುಂದುವರಿದರೆ ಈ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ತಾಲ್ಲೂಕು ಆಡಳಿತ ತಿಳಿಸಿದೆ.

ಸಹಾಯವಾಣಿ ಆರಂಭ:ಮಳೆ ಮುಂದುವರಿದರೆ ನೆರೆ ಬರುವ ಸಂಭವ ಕೂಡ ಇದೆ. ನದಿಪಾತ್ರದ ಜನರು ಯಾವುದೇ ಕಾರಣಕ್ಕೂ ಭಯ ಪಡಬೇಕಾಗಿಲ್ಲ.ಪರಿಸ್ಥಿತಿಯನ್ನು ಎದುರಿಸಲು ತಾಲ್ಲೂಕು ಆಡಳಿತಸಿದ್ಧತೆ ಮಾಡಿಕೊಂಡಿದೆ. ತಾಲ್ಲೂಕಿನಲ್ಲಿ ನೆರೆ ಅನಾಹುತವಾದರೆ ಸ್ಪಂದಿಸಲು ತಹಶೀಲ್ದಾರ್ಕಚೇರಿಯಲ್ಲಿ24x7 ಸಹಾಯವಾಣಿ ತೆರೆಯಲಾಗಿದೆ. ಅಗತ್ಯವಿದ್ದವರು ದೂರವಾಣಿ: 230 243ಗೆ ಕರೆ ಮಾಡಬಹುದು ಎಂದು ತಹಶೀಲ್ದಾರ್ವಿವೇಕ ಶೇಣ್ವಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT