ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನವಾಸಿ ಸಮುದಾಯಗಳ ಸಂಸ್ಕಾರ ಮಾದರಿ: ಎಸ್.ಆರ್.ಎನ್.ಮೂರ್ತಿ

Published 3 ಸೆಪ್ಟೆಂಬರ್ 2023, 13:42 IST
Last Updated 3 ಸೆಪ್ಟೆಂಬರ್ 2023, 13:42 IST
ಅಕ್ಷರ ಗಾತ್ರ

ಕಾರವಾರ: ‘ವನವಾಸಿ ಸಂಸ್ಕೃತಿಯೇ ಭಾರತದ ನೆಲದ ಮೂಲ ಸಂಸ್ಕೃತಿ. ಸಂಸ್ಕಾರವನ್ನು ಉಳಿಸಿಕೊಂಡು ಬರುವ ಕೆಲಸವನ್ನು ಬುಡಕಟ್ಟು ಜನರು ಇಂದಿಗೂ ಮುನ್ನಡೆಸಿಕೊಂಡು ಬಂದಿದ್ದಾರೆ’ ಎಂದು ಭಾರತೀಯ ಸಾಹಿತ್ ಪರಿಷತ್‍ನ ಜಿಲ್ಲಾ ಘಟಕದ ಸಂಯೋಜಕ ಎಸ್.ಆರ್.ಎನ್.ಮೂರ್ತಿ ಹೇಳಿದರು.

ತಾಲ್ಲೂಕಿನ ನಗೆ ಗ್ರಾಮದ ಶಾರದಾ ವನವಾಸಿ ಕಲ್ಯಾಣ ಸಂಸ್ಕಾರ ಕೇಂದ್ರದಲ್ಲಿ ಈಚೆಗೆ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಟ್ಟಾಗಿ ಕೃಷಿ ಮಾಡುವುದು, ಒಂದೆಡೆ ಸೇರಿ ಹಬ್ಬ ಹರಿದಿನಗಳ ಆಚರಣೆ ಮಾಡುವ ಕೆಲಸ ವನವಾಸಿ ಸಮುದಾಯಗಳಿಂದ ನಡೆಯುತ್ತವೆ. ಇವು ಸಹಬಾಳ್ವೆಯ ಸಂದೇಶವನ್ನು ಸಾರುತ್ತಿದ್ದು ನಗರವಾಸಿಗಳು ಇದರಿಂದ ಪಾಠ ಕಲಿಯಬೇಕಾಗಿದೆ’ ಎಂದರು.

ಕೈಗಾದ ವನವಾಸಿ ಕಲ್ಯಾಣ ಸಮಿತಿಯ ಸದಸ್ಯರಾದ ವಿಜಯಲಕ್ಷ್ಮಿ ಬಂಡಿಕಟ್ಟಿ, ರಾಣಿ ರಾಮದಾಸ್, ಮಮತಾ ಶಿವಬಸವಯ್ಯ ಇದ್ದರು. ಸಂಸ್ಕಾರ ಕೇಂದ್ರದ ದೀಪಾ ಹೆಗಡೆ ಕಾರ್ಯಕ್ರಮವನ್ನು ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT