ಹೊನ್ನಾವರ ತಾಲ್ಲೂಕಿನ ಜಲವಳ ಕರ್ಕಿ ಗ್ರಾಮದಲ್ಲಿ ಕಸ ಸಂಗ್ರಹಿಸಿ ವಾಹನಕ್ಕೆ ತುಂಬಿಸುವ ಕಾರ್ಯದಲ್ಲಿ ನಿರತರಾಗಿರುವ ಮಹಿಳಾ ಕಾರ್ಮಿಕರು.
ಸ್ವಚ್ಛತಾ ವಾಹಿನಿ ಚಲಾಯಿಸುತ್ತಿರುವ ಮಹಿಳೆ
ಸ್ವಚ್ಛ ಭಾರತ ಅಭಿಯಾನ ಜಿಲ್ಲೆಯಲ್ಲಿ ಸಾಕಾರಗೊಳಿಸುವಲ್ಲಿ ನಾರಿಶಕ್ತಿಯೇ ಪ್ರಮುಖ ಪಾತ್ರ ವಹಿಸುತ್ತಿದೆ
ಈಶ್ವರ ಕಾಂದೂ ಜಿಲ್ಲಾ ಪಂಚಾಯಿತಿ ಸಿಇಒ
ವಾಹನ ಚಲಾಯಿಸುವ 104 ಮಹಿಳೆಯರು
ಗ್ರಾಮೀಣ ಪ್ರದೇಶದಲ್ಲಿ ಮನೆಗಳಿಂದ ಒಣ ಕಸ ಸಂಗ್ರಹಿಸಿ ಸ್ವಚ್ಛತಾ ಸಂಕೀರ್ಣಕ್ಕೆ ತರುವ ‘ಸ್ವಚ್ಛ ವಾಹಿನಿ’ಗಳನ್ನು ಚಲಾಯಿಸುವವರ ಪೈಕಿ ಬಹುತೇಕ ಮಹಿಳಾ ಚಾಲಕರೇ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 104 ಚಾಲಕಿಯರು ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾ ಪಂಚಾಯಿತಿಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂಜೀವಿನಿ (ಎನ್‌ಆರ್‌ಎಲ್‌ಎಂ) ವಿಭಾಗದಿಂದ 125 ಮಹಿಳೆಯರಿಗೆ ತಿಂಗಳ ಕಾಲ ಚಾಲನಾ ತರಬೇತಿ ನೀಡಿ ಚಾಲನಾ ಪರವಾನಗಿ ಮಾಡಿಕೊಟ್ಟು ಬಳಿಕ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗಿದೆ. ‘ಹಳ್ಳಿ ರಸ್ತೆಗಳಲ್ಲಿನ ಅಪಾಯಕಾರಿ ತಿರುವು ದಟ್ಟ ಕಾಡಿನ ನಡುವೆ ಸಾಗುವ ಮಾರ್ಗದಲ್ಲಿ ವಾಹನ ಚಲಾಯಿಸಿಕೊಂಡು ಸಾಗಲು ಭಯವಾಗುತ್ತಿತ್ತು. ಈಗ ವಾಹನ ಚಾಲನೆ ರೂಢಿಗತವಾಗಿದೆ. ಜೀವನದಲ್ಲಿ ಪುಣ್ಯ ಕೆಲಸವೊಂದನ್ನು ಮಾಡುತ್ತಿರುವ ಹೆಮ್ಮಯಿದೆ’ ಎನ್ನುತ್ತಾರೆ ಸ್ವಚ್ಛ ವಾಹಿನಿ ಚಾಲಕಿ ಸುನೀತಾ ಗೌಡ.