ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಶರಾವತಿ ಕಣಿವೆಗೆ ಸುರಂಗ: ಅಭಯಾರಣ್ಯದಲ್ಲೇ ‘ಅಪಾಯಕಾರಿ’ ಯೋಜನೆ

Published : 18 ಸೆಪ್ಟೆಂಬರ್ 2025, 4:05 IST
Last Updated : 18 ಸೆಪ್ಟೆಂಬರ್ 2025, 4:05 IST
ಫಾಲೋ ಮಾಡಿ
Comments
ವಿದ್ಯುತ್ ಬೇಡಿಕೆ ಪೂರೈಕೆ ನಿರ್ವಹಣೆಗೆ ಪಂಪ್ಡ್ ಸ್ಟೋರೇಜ್ ಯೋಜನೆ ಬದಲು ಉತ್ತರ ಕನ್ನಡ ಶಿವಮೊಗ್ಗ ಜಿಲ್ಲೆಗಳಲ್ಲಿನ 3 ಲಕ್ಷ ಮನೆಗಳಿಗೆ ಚಾವಣಿ ಸೋಲಾರ್ ವ್ಯವಸ್ಥೆ ಕಲ್ಪಿಸಲು ಕೆಪಿಸಿ ಮುಂದಾಗಲಿ
ಅನಂತ ಹೆಗಡೆ ಅಶೀಸರ ಜೀವ ವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾದ ಬಳಿಕವೂ ಗೇರುಸೊಪ್ಪ ಜಲಾಶಯದಿಂದ ನದಿಗೆ ಹರಿಯುವ ನೀರಿನ ಪ್ರಮಾಣದಲ್ಲಿ ಇಳಿಕೆಯಾಗದು. ಸುರಂಗ ಕೊರೆದರೂ ಭೂಕುಸಿತ ಸಂಭವಿಸದು ಎಂಬುದಕ್ಕೆ ವರಾಹಿ ಯೋಜನೆ ಸಾಕ್ಷಿ
ವಿಜಯ ವಿ.ಎಂ ಕೆಪಿಸಿ ಮುಖ್ಯ ಕಚೇರಿಯ ಇಇ
ಭೂಕುಸಿತ ಕಟ್ಟಿಟ್ಟ ಬುತ್ತಿ
‘ಶರಾವತಿ ನದಿ ಕಣಿವೆ ಅಭಯಾರಣ್ಯ ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶ. ಇಲ್ಲಿನ ಮರಗಳನ್ನು ಕಡಿದು ನಾಶಪಡಿಸಿದರೆ ಮಣ್ಣು ಸಡಿಲಗೊಳ್ಳುತ್ತದೆ. ಆಳದಲ್ಲಿ ಸುರಂಗ ಕೊರೆಯುವುದರಿಂದ ಭೂಪದರ ಸಡಿಲಗೊಂಡು ಕುಸಿತಕ್ಕೆ ಅಪಾಯ ತಂದೊಡ್ಡಬಹುದು. ಸುರಂಗ ಕೊರೆಯಲು ಬಳಸುವ ಸ್ಫೋಟಕಗಳಿಂದ ಉಂಟಾಗುವ ಕಂಪನದಿಂದ ವನ್ಯಜೀವಿಗಳು ವಲಸೆ ಹೋಗಬಹುದು. ಜೊತೆಗೆ ಲಿಂಗನಮಕ್ಕಿ ಸೇರಿದಂತೆ ಪ್ರಮುಖ ಜಲಾಶಯಗಳಿಗೂ ಇದು ಅಪಾಯವಾಗಬಹುದು ಎಂಬ ಆತಂಕವಿದೆ’ ಎನ್ನುತ್ತಾರೆ ಸಂರಕ್ಷಣಾ ಜೀವಶಾಸ್ತ್ರಜ್ಞ ಕೇಶವ ಕೊರ್ಸೆ. ‘ಗೇರುಸೊಪ್ಪದಿಂದ ತಳಕಳಲೆಗೆ ಸುರಂಗ ಕೊರೆಯಲು ಕನಿಷ್ಠ 1500 ಕಾರ್ಮಿಕರು ಐದಾರು ವರ್ಷ ಕೆಲಸ ಮಾಡಲಿದ್ದಾರೆ. ಯೋಜನೆ ನಿರ್ಮಾಣ ಹಂತದಲ್ಲೇ ಅರಣ್ಯ ಹಾನಿ ನೀರು ಕಲುಷಿತಗೊಳ್ಳಲಿದೆ ಎಂಬುದಾಗಿ ಪರಿಸರ ಮೌಲ್ಯಮಾಪನ ವರದಿಯಲ್ಲಿ (ಇಐಎ) ಉಲ್ಲೇಖಿಸಲಾಗಿದೆ. ಸೂಕ್ಷ್ಮ ಪ್ರದೇಶಕ್ಕೆ ಉಂಟಾಗುವ ಹಾನಿ ಸರಿಪಡಿಸಲು ಸಾಧ್ಯವಿಲ್ಲ’ ಎಂದು ಹಿರಿಯ ಪರಿಸರವಾದಿಯೊಬ್ಬರು ಆತಂಕ ವ್ಯಕ್ತಪಡಿಸುತ್ತಾರೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸುರಂಗ ಮಾರ್ಗ ನಿರ್ಮಾಣಗೊಳ್ಳಬಹುದಾದ ಬೇಗೋಡಿ ಗ್ರಾಮ ಮತ್ತು ಸುತ್ತಲಿನ ಅರಣ್ಯ ಪ್ರದೇಶ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸುರಂಗ ಮಾರ್ಗ ನಿರ್ಮಾಣಗೊಳ್ಳಬಹುದಾದ ಬೇಗೋಡಿ ಗ್ರಾಮ ಮತ್ತು ಸುತ್ತಲಿನ ಅರಣ್ಯ ಪ್ರದೇಶ
ರೀಲ್ಸ್‌ಗಳ ಮೂಲಕ ಜಾಗೃತಿ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಜಾಗೃತಿ ಮೂಡಿಸಲು ಹೊನ್ನಾವರ ಭಾಗದ ಯುವಕರ ತಂಡ ರಾಜ್ಯವ್ಯಾಪಿ ಆಂದೋಲನಕ್ಕೆ ಮುಂದಾಗಿದೆ. ಹೊನ್ನಾವರ ಫೌಂಡೇಷನ್ ಶರಾವತಿ ಉಳಿಸಿ ಹೋರಾಟ ಸಮಿತಿ ಸೇರಿದಂತೆ ಹಲವು ಸಂಘಟನೆಗಳ ಮೂಲಕ ಜಾಗೃತಿ ಕೆಲಸ ನಡೆದಿದೆ. ಇನ್‌ಸ್ಟಾಗ್ರಾಮ್ ಇನ್‌ಫ್ಲ್ಯೂಯೆನ್ಸರ್‌ಗಳು ಯೋಜನೆ ವಿರುದ್ಧ ಧ್ವನಿ ಎತ್ತುವ ರೀಲ್ಸ್ ಹರಿಬಿಟ್ಟು ಜಾಗೃತಿ ಕಾರ್ಯದಲ್ಲಿ ತೊಡಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT