ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇರಳ ವಯನಾಡು ದುರಂತಕ್ಕೆ ಸಂತಾಪವಿದೆ. ಆದರೆ, ಕರ್ನಾಟಕದ ಸಿಎಂ ಸಿದ್ಧರಾಮಯ್ಯ ಅಲ್ಲಿನ ಸಂತ್ರಸ್ತರಿಗೆ 100 ಮನೆಗಳನ್ನು ಕಟ್ಟಿಸಿ ಕೊಡಲು ಹೊರಟಿದ್ದಾರೆ. ಆದರೆ, ರಾಜ್ಯದ ವಿವಿಧ ಭಾಗಗಳಲ್ಲಿ ದುರಂತವೇ ಹೊದ್ದು ಮಲಗಿರುವಾಗ, ಇಲ್ಲಿಯೇ ಮನೆ ಇಲ್ಲದ ಲಕ್ಷಾಂತರ ಕುಟುಂಬ ಇದ್ದಾಗ ಸಿಎಂ ಪಕ್ಕದ ಮನೆ ಚಿಂತೆ ಮಾಡುತ್ತಿರುವುದು ಶೋಚನೀಯ. ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಮೆಚ್ಚಿಸಲು ನಡೆದುಕೊಂಡ ರೀತಿ ಇದು. ಈ ಮೂಲಕ ಕಾಂಗ್ರೆಸ್‍ನ ತಾರತಮ್ಯ ಧೋರಣೆ ಅನಾವರಣ ಆಗಿದೆ’ ಎಂದರು.