ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಗಿಬೀಸ್‌ನಲ್ಲಿ ಯಕ್ಷ ಸಂಜೆ ಕಾರ್ಯಕ್ರಮ

Published 30 ಜುಲೈ 2023, 14:13 IST
Last Updated 30 ಜುಲೈ 2023, 14:13 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ಕೊಳಗಿಬೀಸ್‌ ಮಾರುತಿ ದೇವಾಲಯದ ಸಭಾಭವನದಲ್ಲಿ ಆ.1ರಂದು ಸಂಜೆ 4.30ಕ್ಕೆ ಸಹಜಾನಂದ ಅವದೂತರ ಪುಣ್ಯಾರಾಧನೆ ಅಂಗವಾಗಿ ಯಕ್ಷ ಸಂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸದ್ಭಾವನಾ ಸೇವಾ ಸಂಸ್ಥೆ ಏರ್ಪಡಿಸಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ಎಂ.ಎಸ್.ಹೆಗಡೆ ನೇರ್ಲದ್ದ ವಹಿಸುವರು. ಉದ್ಘಾಟಕರಾಗಿ ದೇವಾಲಯದ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳೂಮನೆ, ಅತಿಥಿಗಳಾಗಿ ಕುಮಾರ ಭಟ್ಟ ಕೊಳಗಿಬೀಸ್, ಅಂಜನಾ ಹೆಗಡೆ, ವತ್ಸಲಾ ಹೆಗಡೆ, ಜಯಪುತ್ರ ಎಲ್.ಜಿ ಆಗಮಿಸುವರು. 

ಸಭಾ ಕಾರ್ಯಕ್ರಮದ ನಂತರ ನವ್ಯ ಹೆಗಡೆ ದೇವತೆಮನೆ ಅವರಿಂದ ಭಕ್ತಿಗೀತೆ ಹಾಗೂ ಸ್ತುತಿ ಹೆಗಡೆ ಓಣಿಕೇರಿ ಅವರಿಂದ ಭರತನಾಟ್ಯ ನಡೆಯಲಿದೆ. ಸ್ಥಳೀಯ ಹಾಗೂ ಅತಿಥಿ ಕಲಾವಿದರಿಂದ ಸಮರ ಸೌಗಂಧಿಕಾ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಕಲಾಭಿಮಾನಿಗಳು ಪಾಲ್ಗೊಳ್ಳುವಂತೆ ಸಂಘಟಕ ಜಿ.ವಿ.ಹೆಗಡೆ ಓಣಿಕೇರಿ ಪ್ರಕಟಣೆ ಮೂಲಕ  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT