ಕಾರವಾರ: ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸೋಮವಾರ ಅಲೆಗಳ ನಡುವೆ ಸುಳಿಗೆ ಸಿಲುಕಿದ್ದ ಆರು ಮಕ್ಕಳನ್ನು ರಕ್ಷಿಸಲಾಗಿದೆ.

ಹಳೆ ಹುಬ್ಬಳ್ಳಿಯಿಂದ ಶಫಿ ಎಂಬುವವರ ಕುಟುಂಬವು ನಗರಕ್ಕೆ ಪ್ರವಾಸ ಬಂದಿತ್ತು. ಒಟ್ಟು 19 ಮಂದಿ ಸಮುದ್ರಕ್ಕೆ ಇಳಿದಿದ್ದರು. ಅವರೊಂದಿಗೆ ಆರು ಮಕ್ಕಳೂ ನೀರಿಗೆ ಹೋದರು. ಅವರನ್ನು ಗಮನಿಸಿದ ‘ಪ್ರವಾಸಿ ಮಿತ್ರ’ ಸಿಬ್ಬಂದಿ ಎಚ್ಚರಿಕೆ ಕೊಟ್ಟರು. ಆದರೂ ನಿರ್ಲಕ್ಷ್ಯ ವಹಿಸಿ ಮತ್ತಷ್ಟು ಮುಂದೆ ಹೋದಾಗ ಅಲೆಗಳ ಸೆಳೆತದಲ್ಲಿ ಸಿಲುಕಿದರು.

ಮಕ್ಕಳನ್ನು ಅಪಾಯದಲ್ಲಿ ಇರುವುದನ್ನು ಗಮನಿಸಿದ ‘ಪ್ರವಾಸಿ ಮಿತ್ರ’ರು, ಲೈಫ್‌ಗಾರ್ಡ್‌ಗಳು, ಪೊಲೀಸ್ ಹಾಗೂ ಸಮೀಪದ ‘ವೇವ್ಸ್ ಅಡ್ವೆಂಚರ್’ ಸಿಬ್ಬಂದಿ ರಕ್ಷಣೆಗೆ ಧಾವಿಸಿದರು. ಮಕ್ಕಳನ್ನು ದಡಕ್ಕೆ ಕರೆತಂದು ಪ್ರಾಥಮಿಕ ಉಪಚಾರ ನೀಡಿದ ಬಳಿಕ ಚೇತರಿಸಿಕೊಂಡರು. ಈ ಸಂಬಂಧ ಪಾಲಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ.

‘ಪ್ರವಾಸಿ ಮಿತ್ರ’ ರಾಘವೇಂದ್ರ ನಾಯ್ಕ, ಲೈಫ್‌ಗಾರ್ಡ್‌ಗಳಾದ ಚಂದನ್ ಜೋಶಿ, ಕೇತನ್, ನಾಗರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.