ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಬಸ್ ನಿರ್ವಾಹಕರು ಸೇರಿ ಆರು ಮಂದಿಗೆ ಕೋವಿಡ್

Last Updated 26 ಜೂನ್ 2020, 17:55 IST
ಅಕ್ಷರ ಗಾತ್ರ

ಕಾರವಾರ/ ಯಲ್ಲಾಪುರ: ಜಿಲ್ಲೆಯಲ್ಲಿ ಶುಕ್ರವಾರ ಆರು ಮಂದಿಗೆ ಕೋವಿಡ್ 19 ದೃಢಪಟ್ಟಿದೆ. ಅವರಲ್ಲಿ ಎರಡು ಮತ್ತು ನಾಲ್ಕು ವರ್ಷದ ಬಾಲಕರೂ ಇದ್ದಾರೆ.

ಹೊಸದಾಗಿ ಖಚಿತವಾಗಿರುವ ಸೋಂಕಿತರಲ್ಲಿ ಮುಂಬೈನಿಂದ ಬಂದಿರುವ ಹಳಿಯಾಳದ ನಾಲ್ಕು ವರ್ಷದ ಬಾಲಕ, ಹೊನ್ನಾವರದ ಎರಡು ವರ್ಷದ ಬಾಲಕ ಮತ್ತು 37 ವರ್ಷದ ವ್ಯಕ್ತಿ ಒಳಗೊಂಡಿದ್ದಾರೆ.ಮಂಗಳೂರಿಗೆ ಪ್ರಯಾಣಿಸಿದ್ದ ಅಂಕೋಲಾದ 45 ವರ್ಷದ ವ್ಯಕ್ತಿಗೂ ಸೋಂಕು ದೃಢಪಟ್ಟಿದೆ.

ಯಲ್ಲಾಪುರದವರಾದ 45 ವರ್ಷ ಮತ್ತು 26 ವರ್ಷದ ಇಬ್ಬರು ಬಸ್ ನಿರ್ವಾಹಕರಲ್ಲೂಕೋವಿಡ್ ಕಾಣಿಸಿಕೊಂಡಿದೆ. ಅವರು ಕೆಲವು ದಿನಗಳ ಹಿಂದೆ ಸೋಂಕಿತರಾದ ಬಸ್ ನಿರ್ವಾಹಕರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು.

ಒಂದೇ ಮನೆಯಲ್ಲಿದ್ದರು:ಶುಕ್ರವಾರ ಕೋವಿಡ್ ದೃಢಪಟ್ಟ ಇಬ್ಬರು ನಿರ್ವಾಹಕರು ಈ ಮೊದಲೇ ಸೋಂಕಿತರಾದ ಸಹೋದ್ಯೋಗಿಯ ಮನೆಯಲ್ಲಿ ಜೊತೆಯಲ್ಲೇ ವಾಸಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಬಸ್‌ನಲ್ಲಿ ಕರ್ತವ‌್ಯದ ನಿಮಿತ್ತ ಹೋಗಿದ್ದ ನಿರ್ವಾಹಕರಿಗೆ ಸೋಂಕು ದೃಢಪಟ್ಟಿತ್ತು. ಇವರಿಬ್ಬರೂ ಅವರ ಜೊತೆಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.

ಅವರ ಸಂಪರ್ಕಕ್ಕೆ ಬಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆರು ಮಂದಿ ಸಿಬ್ಬಂದಿ ಸೇರಿದಂತೆ, ಒಟ್ಟು 40 ಜನರ ಗಂಟಲು ದ್ರವದ ಮಾದರಿಯನ್ನುಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ 26 ಜನರ ಪ್ರಯೋಗಾಲಯ ವರದಿ ಬಂದಿದ್ದು, ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಇನ್ನೂ 14 ಜನರ ಪ್ರಯೋಗಾಲಯ ವರದಿ ಬರಬೇಕಿದೆ.

‘ಶುಕ್ರವಾರ ಕೋವಿಡ್ ದೃಢಪಟ್ಟ ಇಬ್ಬರು ನಿರ್ವಾಹಕರೂಕರ್ತವ್ಯಕ್ಕೆ ಹೋಗಿರಲಿಲ್ಲ. ಹಾಗಾಗಿ ಭಯಪಡಬೇಕಾದ ಅಗತ್ಯವಿಲ್ಲ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ನರೇಂದ್ರ ಪವಾರ್ ತಿಳಿಸಿದ್ದಾರೆ.

ಬಟ್ಟೆ ಅಂಗಡಿ ಬಂದ್:ಕೋವಿಡ್‌ ದೃಢಪಟ್ಟಿರುವ ಅಂಕೋಲಾ ತಾಲ್ಲೂಕಿನ ಅಗ್ರಗೋಣದ ವ್ಯಕ್ತಿಯ ಕುಟುಂಬ ಸದಸ್ಯರೊಬ್ಬರು ಶುಕ್ರವಾರ ಕುಮಟಾದ ಮಾರುಕಟ್ಟೆಯಲ್ಲಿ ಬಟ್ಟೆ ಅಂಗಡಿಯೊಂದಕ್ಕೆ ಭೇಟಿ ನೀಡಿದ್ದರು. ಇದರಮಾಹಿತಿ ಪಡೆದ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು, ಆ ಅಂಗಡಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮುಚ್ಚಿಸಿದ್ದಾರೆ.

‘ಬಟ್ಟೆ ಅಂಗಡಿಯನ್ನುಮುನ್ನೆಚ್ಚರಿಕೆ ಕ್ರಮವಾಗಿ ಸ್ಯಾನಿಟೈಸ್ ಮಾಡಲಾಗುತ್ತದೆ. ಹಾಗಾಗಿಅದನ್ನು ಸದ್ಯ ಮುಚ್ಚಲಾಗಿದೆ’ ಎಂದು ಪಿ.ಎಸ್.‌ಐ ಆನಂದಮೂರ್ತಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿಒಟ್ಟು ಸೋಂಕಿತರ ಸಂಖ್ಯೆ 173ಕ್ಕೇರಿದ್ದು, 51 ಸಕ್ರಿಯ ಪ್ರಕರಣಗಳಿವೆ. 122 ಮಂದಿ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT