ಕುಮಟಾ: ‘ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾದರೆ ಅವರ ಭವಿಷ್ಯಕಷ್ಟೇ ಅಲ್ಲದೆ ದೇಶದ ಅಭಿವೃದ್ಧಿಗೂ ಅದು ಮಾರಕವಾಗುತ್ತದೆ' ಎಂದು ಮೀನುಗಾರಿಕೆ, ಬಂದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಕುಮಟಾದಲ್ಲಿ ಮಂಗಳವಾರ ನೆಲ್ಲಿಕೇರಿ ಕರ್ನಾಟಕ ಪಬ್ಲಿಕ್ ಸ್ಕೂಲ್ನ 15 ಕೊಠಡಿಗಳ ಕಟ್ಟಡ ಹಾಗೂ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘2,600ಕ್ಕೂ ಹೆಚ್ಚು ವಿದ್ಯಾಥಿಗಳನ್ನು ಹೊಂದಿರುವ ಈ ಶಾಲೆ ರಾಜ್ಯದಲ್ಲಿಯೇ ಹೆಮ್ಮೆಯಾಗಿದೆ. ಶಾಲೆಗೆ ಹೆಚ್ಚುವರಿ ಶೌಚಾಲಯ, ಕುಡಿಯುವ ನೀರು ಮುಂತಾದ ಸೌಲಭ್ಯವನ್ನು ಸ್ಥಳೀಯ ಶಾಸಕರೊಟ್ಟಿಗೆ ಚರ್ಚಿಸಿ ಕಲ್ಪಿಸಲಾಗುವುದು. ಈ ಶಾಲೆ ಇಬ್ಬರು ಶಾಸಕರನ್ನು ನೀಡಿದೆ ಎನ್ನುವ ಸಂಗತಿಯೇ ಅತ್ಯಂತ ಹೆಮ್ಮೆ ಹಾಗೂ ವಿಶೇಷವಾದುದು' ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ‘ಕುಮಟಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಳದಿಪುರ ಗ್ರಾಮ ಪಂಚಾಯಿತಿ ಕಟ್ಟಡ, ಪಟ್ಟಣದ ಶಾಲೆ, ಕಾಲೇಜು ಕಟ್ಟಡ, ಸರ್ಕೂಟ್ ಹೌಸ್ ಹಾಗೂ ತಾಲ್ಲೂಕಿನ ಬೊಗರಿಬೈಲ-ಕತಗಾಲ ನಡುವಿನ ಅಘನಾಶಿನಿ ನದಿ ಸೇತುವೆಯನ್ನು ಜನರ ಬಳಕೆಗೆ ನೀಡಿರುವುದು ಸ್ಥಳೀಯ ಅಭಿವೃದ್ಧಿ ಕಾರ್ಯದಲ್ಲಿ ಒಂದು ಮೈಲಿಗಲ್ಲಾಗಿದೆ’ ಎಂದರು.

‘ಉದ್ಘಾಟನೆಗೊಂಡ ಸೇತುವೆ ಸ್ಥಳೀಯರ ಓಡಾಟಕ್ಕೆ ಸುಮಾರು 20 ಕಿ.ಮೀ. ದೂರದ ಪ್ರಯಾಣವನ್ನು ಉಳಿಸುತ್ತಿದ್ದು, ಸೇತುವೆ ಮೇಲೆ ಬಸ್ ಸಂಚಾರಕ್ಕೂ ಸಿದ್ಧತೆ ನಡೆಸಲಾಗಿದೆ. ಹನುಮಂತ ಬೆಣ್ಣೆ ನೆಲ್ಲಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರತ್ಯೇಕ ರಸ್ತೆ, ಹಸಿದು ಪಾಠ ಕೇಳುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಅತ್ಯಲ್ಪ ದರದಲ್ಲಿ ಉಪಹಾರ ವ್ಯವಸ್ಥೆ ಕೂಡ ಕಲ್ಪಿಸಿರುವುದು ವಿಶೇಷ' ಎಂದರು.

ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನಿತ್ಯಾನಂದ ನಾಯಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಿ.ಡಿ.ಪಿ.ಐ ಸತೀಶ ನಾಯ್ಕ, ಲತಾ ನಾಯಕ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಉಪನಿರ್ದೇಶಕ ಎನ್.ಆರ್.ಹೆಗಡೆ, ಬಿ.ಇ.ಒ ಉದಯ ನಾಯ್ಕ, ಇ.ಒ ಆರ್.ಎಲ್.ಭಟ್ಟ, ತಹಶೀಲ್ದಾರ್ ಕೃಷ್ಣ ಕಾಮಕರ್, ನೆಲ್ಲಿಕೇರಿ ಕೆ.ಪಿ.ಎಸ್ ಮುಖ್ಯಶಿಕ್ಷಕ ಟಿ.ಎನ್.ಗೌಡ, ಶಾಂತಿ ಅಡಿಗುಂಡಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎ.ಇ.ಇ ಕಲ್ಪನಾ ವಾಗ್ಮೋರೆ, ಅಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.