‘ಯಕ್ಷಗಾನ ಪರಂಪರೆ, ಕಲಾ ಪ್ರಕಾರವನ್ನು ಬೆಳೆಸುವ ನಿಟ್ಟಿನಲ್ಲಿ ಮಂಡಳಿಯ ಕೊಡುಗೆ, ಯಕ್ಷಗಾನ ಕಲೆಯ ಪ್ರಚಾರ, ದಾಖಲಾತಿ ಮೊದಲಾದ ಅಂಶಗಳನ್ನು ಪರಿಗಣಿಸಿ ವಿಶ್ವಸಂಸ್ಥೆ ಮಾನ್ಯತೆ ನೀಡಿದೆ. ಯಕ್ಷಗಾನ ಪ್ರದರ್ಶನ, ತರಬೇತಿ ಕಾರ್ಯಾಗಾರ, ಪ್ರತಿ ವರ್ಷ ರಾಷ್ಟ್ರೀಯ ನಾಟ್ಯೋತ್ಸವ ಸಂಘಟನೆ ಮೊದಲಾದ ಕಾರ್ಯಗಳನ್ನು 90 ವರ್ಷಗಳಿಂದ ಮಂಡಳಿ ಮುನ್ನಡೆಸಿದೆ. ವಿಶ್ವ ಸಂಸ್ಥೆಯ ಮಾನ್ಯತೆ ಮಂಡಳಿಯ ಕಾರ್ಯಕ್ಕೆ ಇನ್ನಷ್ಟು ನೈತಿಕ ಬಲ ನೀಡಿದೆ’ ಎಂದು ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ.