ಶಿರಸಿ: ‘ಬ್ರಾಹ್ಮಣರ ಉಪಪಂಗಡಗಳ ನಡುವೆ ಸಹಮತವಿಲ್ಲ. ಆಯಾ ಉಪಪಂಗಡಗಳ ಆಚಾರ, ವಿಚಾರ ಮನೆಯಲ್ಲಿರಲಿ. ಹೊರಗೆ ಬ್ರಾಹ್ಮಣರೆಲ್ಲರೂ ಒಂದಾಗಿರಬೇಕು. ಒಗ್ಗಟ್ಟು ಇಲ್ಲದಿದ್ದರೆ ಸಮುದಾಯ ಅಳಿದು ಹೋಗುತ್ತದೆ’ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ ಹೇಳಿದರು.

ನಗರದ ಯೋಗಮಂದಿರದಲ್ಲಿ ಶನಿವಾರ ಮಂಡಳಿ ವತಿಯಿಂದ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿದ ಬ್ರಾಹ್ಮಣ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣರು ಮಕ್ಕಳಿಗೆ ವಿದ್ಯೆ ನೀಡುವುದಕ್ಕಷ್ಟೇ ಪ್ರಾಮುಖ್ಯತೆ ನೀಡುವ ಸ್ಥಿತಿ ಎದುರಾಗಿದೆ. ವಿದ್ಯೆ ಜತೆಗೆ ಉತ್ತಮ ಸಂಸ್ಕಾರವನ್ನೂ ನೀಡಿ ಬ್ರಾಹ್ಮಣತ್ವ ಉಳಿಸುವ ಕೆಲಸವಾಗಬೇಕು‘ ಎಂದರು.

‘ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಯೋಜನೆ ರೂಪಿಸಲಾಗಿದೆ. ದುರ್ಬಲ ಸ್ಥಿತಿಯಲ್ಲಿದ್ದ ಮಂಡಳಿ ಬಲಪಡಿಸುವ ಕೆಲಸ ಮಾಡಲಾಗಿದೆ’ ಎಂದರು.

ಮಂಡಳಿ ನಿರ್ದೇಶಕ ಸುಬ್ರಾಯ ಹೆಗಡೆ ಗೌರಿಬಣ್ಣಿಗೆ, ‘ಬ್ರಾಹ್ಮಣರು ಬುದ್ಧಿಮತ್ತೆಯಿಂದ ಬದುಕುತ್ತಿದ್ದಾರೆ. ಶೈಕ್ಷಣಿಕವಾಗಿ ಮತ್ತಷ್ಟು ಪ್ರೋತ್ಸಾಹ ಮಾಡಬೇಕು’ ಎಂದರು.

ಬ್ರಾಹ್ಮಣ ಮಹಾಸಭಾ ಪ್ರಮುಖ ಜಿ.ಎಂ.ಹೆಗಡೆ ಮುಳಖಂಡ ಸ್ವಾಗತಿಸಿದರು. ಕೆ.ವಿ.ಭಟ್ಟ, ಎಸ್.ಎನ್.ಭಟ್ಟ, ದಾಮೋದರ ಭಟ್ಟ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.