‘ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳ ಸಂಘವು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವವರೆಗೆ ಪ್ರತಿಭಟನೆಯಿಂದ ಹಿಂದೆ ಕದಲುವುದಿಲ್ಲ. ಕೆಲಸಕ್ಕೆ ಸೆ.30ರಿಂದ ಮುಂದಿನ 15 ದಿನಗಳ ವರೆಗೆ ರಜೆ ಹಾಕಿದ್ದೇವೆ. ಅಲ್ಲಿವರೆಗೂ ಬೇಡಿಕೆ ಈಡೇರದಿದ್ದರೆ ಇನ್ನಷ್ಟು ದಿನ ರಜೆ ಹಾಕಿ ಪ್ರತಿಭಟಿಸುತ್ತೇವೆ’ ಎಂದು ಗ್ರಾಮ ಆಡಳಿತಾಧಿಕಾರಿಗಳ ಸಂಘ ಎಚ್ಚರಿಸಿದೆ.