ಶಿರಸಿ ತಾಲ್ಲೂಕಿನ ಗುಡ್ನಾಪುರ ಗ್ರಾಮದಲ್ಲಿರುವ ರಾಣಿಕೋಟೆ
ಸಿದ್ದಾಪುರ ತಾಲ್ಲೂಕಿನ ಬಿಳಗಿಯ ಗೋಲಬಾವಿ ಸರಿಯಾದ ನಿರ್ವಹಣೆ ಇಲ್ಲದೇ ಪಾಳು ಬಿದ್ದಿರುವುದು.
ಅಂಕೋಲಾ ತಾಲ್ಲೂಕಿನ ಸೂರ್ವೆ ಗ್ರಾಮದ ಐತಿಹಾಸಿಕ ಕಳಶ ದೇವಾಲಯ.

ಸೋಂದಾ ಕೋಟೆ ಸೇರಿದಂತೆ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಮಾರಕಗಳ ರಕ್ಷಣೆ ಸಲುವಾಗಿ ಪುರಾತತ್ವ ಇಲಾಖೆ ತನ್ನ ವ್ಯಾಪ್ತಿಯ ಆಸ್ತಿಗಳ ಸಮರ್ಪಕ ನಿರ್ವಹಣೆಗೆ ಮುತುವರ್ಜಿ ವಹಿಸುವ ಅಗತ್ಯವಿದೆ
ರತ್ನಾಕರ ಬಾಡಲಕೊಪ್ಪ ಸೋಂದಾ ಜಾಗೃತ ವೇದಿಕೆಯ ಸಂಚಾಲಕ 
ಪ್ರವಾಸೋದ್ಯಮ ಇಲಾಖೆಯ ಸುಪರ್ದಿಯಲ್ಲಿರುವ ಬಿಳಗಿಯ ಗೋಲಬಾವಿ ಸುತ್ತ ಕೇವಲ ಬೇಲಿಯನ್ನು ನಿರ್ಮಿಸಿದ್ದರ ಹೊರತಾಗಿ ಮತ್ತ್ಯಾವ ಅಭಿವೃದ್ಧಿ ಕೆಲಸಗಳು ನಡೆದಿಲ್ಲ
ಸಂತೋಷ ಬಿಳಗಿ ಬಿಳಗಿ ಗ್ರಾಮಸ್ಥ
ಸೋದೆ ಅರಸರ ಕಾಲದಲ್ಲಿ ನಿರ್ಮಿಸಿದ್ದ ಭದ್ರ ಕೋಟೆಗಳ ಪಳಿಯುಳಿಕೆಗಳು ಕಾರವಾರದ ವಿವಿಧೆಡೆ ಕಾಣಸಿಗುತ್ತಿವೆ. ಅವುಗಳನ್ನು ಸರಿಯಾಗಿ ನಿರ್ವಹಿಸಿಟ್ಟಿದ್ದರೆ ಐತಿಹಾಸಿಕ ಕುರುಹುಗಳು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗುತ್ತಿತ್ತು
ಸದಾನಂದ ಗಾಂವಕರ ಮುಡಗೇರಿ ಗ್ರಾಮಸ್ಥ